ಕೊಲ್ಲಂ: ಬಿಎಂಎಸ್ ವಿದ್ಯಾರ್ಥಿನಿ ವಿಸ್ಮಯ ಪತಿಯ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣದಲ್ಲಿ ಪತಿ ಕಿರಣ್ ಕುಮಾರ್ ಅಪರಾಧಿ ಎಂದು ನ್ಯಾಯಾಲಯ ಹೇಳಿದೆ. ಆತ್ಮಹತ್ಯೆಯ ಪ್ರೇರಣೆ ಇತ್ತೆಂಬುದು ಸ್ಪಷ್ಟವಾಗಿದೆ ಎಂದು ನ್ಯಾಯಾಲ ಬೊಟ್ಟುಮಾಡಿದೆ. 1 ನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಪ್ರಕರಣದಲ್ಲಿ ತೀರ್ಪುನ್ನು ನಾಳೆ ನೀಡಲಿದೆ. ಆರೋಪಿಗೆ ಜಾಮೀನು ರದ್ದುಗೊಳಿಸಲಾಗಿದೆ.
ಮರಣ, ವರದಕ್ಷಿಣೆ ಕಿರುಕುಳ,ಸಾವಿಗೆ ಪ್ರೇರಣೆ, ತೊಂದರೆ ಕೊಡುವುದು, ಬೆದರಿಕೆ ಹಾಕುವುದು ಮುಂತಾದ ಆರೋಪಗಳು ಗಂಡನ ಮೇಲೆ ಹೇರಲ್ಪಟ್ಟಿದ್ದವು. ವಿಸ್ಮಯ ಮೃತಳಾಗಿ ಒಂದು ವರ್ಷ ಪೂರ್ತಿಯಾಗುವ ಮೊದಲೇ ಪ್ರಕರಣದ ವಿಚಾರಣೆಯ ಕ್ರಮಗಳನ್ನು ಪೂರ್ಣಗೊಳಿಸಿ ನ್ಯಾಯಾಲಯ ತೀರ್ಪು ನೀಡಲಿದೆ.
ಕೊನೆಯ ಗಳಿಗೆಯ ವರೆಗೂ ತಾನು ತಪ್ಪು ಎಸಗಿಲ್ಲವೆಂದೇ ವಿಸ್ಮಯಳ ಪತಿ ಕಿರಣ್ ವಾದ ಮಂಡಿಸಿದ್ದ. 2020 ಮೇ 30 ರಂದು ವಿಸ್ಮಯ ಅಸಿಸ್ಟೆಂಟ್ ಮೋಟಾರ್ ವಾಹನದ ಇನ್ಸ್ಪೆಕ್ಟರ್ ಆಗಿದ್ದ ಪತಿ ಕಿರಣ್ ಮನೆಯ ಬಚ್ವಲಲ್ಲಿ ಮೃತಳಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು.ಬಳಿಕ ನಡೆದ ತನಿಖೆಯಲ್ಲಿ ಪತಿ ಕಿರಣ್ ನನ್ನು ಪೋಲೀಸರು ಬಂಧಿಸಿದ್ದರು.ಈ ಮಧ್ಯೆ ಮೋಟಾರು ವಾಹನ ಇಲಾಖೆ ಕಿರಣ್ ನನ್ನು ವೃತ್ತಿಯಿಂದ ಕಿತ್ತೊಗೆದಿತ್ತು.