ಕಾಸರಗೋಡು: ಲಯನ್ಸ್ ಕ್ಲಬ್ ಇಂಟರ್‍ನ್ಯಾಶನಲ್ 2020-21ನೇ ಸಾಲಿನ ಕೇರಳ ರಾಜ್ಯಮಟ್ಟದಲ್ಲಿ ನೀಡಲಾಗುವ ಜಿಲ್ಲಾ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಲಯನ್ಸ್ ಕ್ಲಬ್ ವಿದ್ಯಾನಗರದ ಮಾಜಿ ಅಧ್ಯಕ್ಷ ಪ್ರಶಾಂತ್ ಜಿ ನಾಯರ್ ಅವರು ಕೇರಳದ ಅತ್ಯುತ್ತಮ ಪ್ರಾದೇಶಿಕ ಅಧ್ಯಕ್ಷ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಮೇ 22 ರಂದು ಚಾಲಕುಡಿಯಲ್ಲಿ ನಡೆಯಲಿರುವ ಮಲ್ಟಿಪ್ಲೆಕ್ಸ್ ಸಮಾವೇಶದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಲಯನ್ಸ್ ರಾಜ್ಯಾಧ್ಯಕ್ಷ ಡಾ. ರಾಜೀವ್ ಮಾಹಿತಿ ನೀಡಿರುವರು.