ಕುಂಬಳೆ: ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಸಂಘದ ಆಶ್ರಯದಲ್ಲಿ ಪತ್ರಕರ್ತ ಸದಸ್ಯರಿಗೆ ಈ ಬಾರಿಯ ಗುರುತಿನ ಚೀಟಿ ವಿತರಣೆ ಹಾಗೂ ಸದಸ್ಯರ ಮಕ್ಕಳಿಗೆ ಕಲಿಕೋಪಕರಣ ವಿತರಣೆ ಕಾರ್ಯಕ್ರಮ ಇಂದು (ಮಂಗಳವಾರ) ಬೆಳಗ್ಗೆ 10 ಕ್ಕೆ ಕುಂಬಳೆಯ ಕೆನರಾ ಬ್ಯಾಂಕ್‍ನ ಮೇಲ್ಗಡೆಯಿರುವ ಮಾಧವ ಪೈ ಸಭಾಂಗಣದಲ್ಲಿ ನಡೆಯಲಿದೆ. ಘಟಕದ ಅಧ್ಯಕ್ಷ ಎ.ಆರ್.ಸುಬ್ಬಯ್ಯಕಟ್ಟೆ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಗುರುತಿನ ಚೀಟಿ ಹಾಗೂ ಕಲಿಕೋಪಕರಣ ವಿತರಣೆ ನಡೆಯಲಿದೆ.
ಸದಸ್ಯರ ಮಕ್ಕಳಿಗೆ ಬ್ಯಾಗ್, ಕೊಡೆ, ಪುಸ್ತಕ, ವಾಟರ್ ಬಾಟ್ಲ್ ಸಹಿತ ಕಿಟ್ ನೀಡಲಾಗುವುದು.