ನವದೆಹಲಿ: ಜೈವಿಕ ಇಂಧನಗಳ ರಾಷ್ಟ್ರೀಯ ನೀತಿ 2018ರ ತಿದ್ದುಪಡಿ ಪ್ರಸ್ತಾವನೆಯನ್ನು ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯ ಕೇಂದ್ರ ಸಚಿವ ಸಂಪುಟ ಸಭೆ ಬುಧವಾರ ಅನುಮೋದಿಸಿದೆ. ಈ ಪ್ರಸ್ತಾವನೆಯು ದೇಶೀಯ ತಂತ್ರಜ್ಞಾನಗಳ ಬೆಳವಣಿಗೆಗಳನ್ನು ಆಕರ್ಷಿಸುತ್ತದೆ ಮತ್ತು ಪೋ›ತ್ಸಾಹಿಸುತ್ತದೆ.
ಸಮಿತಿ ಶಿಫಾರಸಿನಂತೆ ತಿದ್ದುಪಡಿ: ಜೈವಿಕ ಇಂಧನ ಕ್ಷೇತ್ರದಲ್ಲಿನ ಪ್ರಗತಿ ಸಾಧನೆಗಾಗಿ ಜೈವಿಕ ಇಂಧನ ಉತ್ಪಾದನೆಯನ್ನು ಹೆಚ್ಚಿಸಲು ರಾಷ್ಟ್ರೀಯ ಜೈವಿಕ ಇಂಧನ ಸಮನ್ವಯ ಸಮಿತಿ (ಎನ್ಬಿಸಿಸಿ) ಸಭೆಗಳಲ್ಲಿ ತೆಗೆದುಕೊಂಡ ವಿವಿಧ ನಿರ್ಧಾರಗಳು, ಸ್ಥಾಯಿ ಸಮಿತಿಯ ಶಿಫಾರಸು ಹಾಗೂ ಮುಂದಿನ ವರ್ಷ ಏಪ್ರಿಲ್ 1ರಿಂದ ದೇಶಾದ್ಯಂತ ಶೇಕಡ 20ರವರೆಗೆ ಎಥೆನಾಲ್ ಮಿಶ್ರಿತ ಪೆಟ್ರೋಲ್ ಅನ್ನು ಪರಿಚಯಿಸುವ ನಿರ್ಧಾರಗಳಿಗೆ ಅನುಗುಣವಾಗಿ, ಜೈವಿಕ ಇಂಧನಗಳ ರಾಷ್ಟ್ರೀಯ ನೀತಿಗೆ ಹಲವು ತಿದ್ದುಪಡಿಗಳನ್ನು ಮಾಡಲಾಗಿದೆ.
ಪಿಎಸ್ಇ ಆಡಳಿತ ಮಂಡಳಿಗೆ ಬಲ: ಸರ್ಕಾರಿ ಸ್ವಾಮ್ಯದ ಕಂಪನಿಗಳ ಆಡಳಿತ ಮಂಡಳಿಗಳಿಗೆ ಬಲ ತುಂಬುವ ಪ್ರಸ್ತಾವನೆಯನ್ನು ಕೇಂದ್ರ ಸಚಿವ ಸಂಪುಟ ಬುಧವಾರ ಅಂಗೀಕರಿಸಿದೆ. ಇದರಂತೆ, ಕಂಪನಿ ಘಟಕಗಳ/ಅಧೀನ ಸಂಸ್ಥೆಗಳ ಮುಚ್ಚುವಿಕೆ, ವಿಲೀನಗೊಳಿಸುವ ಅಥವಾ ಹೊಸ ಸಂಸ್ಥೆಗಳ ಖರೀದಿ ನಿರ್ಧಾರವನ್ನು ಆಯಾ ಕಂಪನಿಗಳ ಆಡಳಿತ ಮಂಡಳಿಗಳೇ ತೆಗೆದುಕೊಳ್ಳಬಹುದಾಗಿದೆ. ಆದಾಗ್ಯೂ, ಹೂಡಿಕೆ ಹಿಂಪಡೆತ, ಜಂಟಿ ಹೂಡಿಕೆ ಮುಂತಾದವುಗಳ ನಿರ್ಧಾರ ತೆಗೆದುಕೊಳ್ಳುವ ಹಕ್ಕು ಷರತ್ತು ಬದ್ಧವಾಗಿದ್ದು, ಪೂರ್ಣಾಧಿಕಾರವಲ್ಲ.
ತಿದ್ದುಪಡಿ ಅಂಶಗಳು
- ಜೈವಿಕ ಇಂಧನಗಳ ಉತ್ಪಾದನೆಗೆ ಹೆಚ್ಚಿನ ಫೀಡ್ ಸ್ಟಾಕ್ಗಳನ್ನು ಅನುಮತಿಸುವುದು.
- ಪೆಟ್ರೋಲ್ನಲ್ಲಿ 20% ಎಥೆನಾಲ್ ಮಿಶ್ರಣದ ಗುರಿ ಸಾಧನೆಗೆ ಗಡುವನ್ನು 2030ನೇ ಸಾಲಿನ ಬದಲು ಮುಂಚಿತವಾಗಿ 2025-26ನೇ ಸಾಲಿಗೆ ಬದಲಾಯಿಸುವುದು.
- ಮೇಕ್ ಇನ್ ಇಂಡಿಯಾ ಅಭಿಯಾನದ ಅಡಿಯಲ್ಲಿ, ವಿಶೇಷ ಆರ್ಥಿಕ ವಲಯಗಳು/ ರಫ್ತು ಆಧಾರಿತ ಘಟಕಗಳ (ಇಒಯುಎಸ್) ಮೂಲಕ ದೇಶದಲ್ಲಿ ಜೈವಿಕ ಇಂಧನಗಳ ಉತ್ಪಾದನೆಯನ್ನು ಉತ್ತೇಜಿಸುವುದು.
- ್ಝ ಎನ್ಬಿಸಿಸಿಗೆ ಹೊಸ ಸದಸ್ಯರ ಸೇರ್ಪಡೆ ಮತ್ತು ನಿರ್ದಿಷ್ಟ ಸಂದರ್ಭಗಳಲ್ಲಿ ಜೈವಿಕ ಇಂಧನಗಳ ರಫ್ತಿಗೆ ಅನುಮತಿ ನೀಡುವುದು,
- ್ಝ ರಾಷ್ಟ್ರೀಯ ಜೈವಿಕ ಇಂಧನ ಸಮನ್ವಯ ಸಮಿತಿಯ ಸಭೆಗಳಲ್ಲಿ ತೆಗೆದುಕೊಳ್ಳಲಾದ ನಿರ್ಣಯಗಳಿಗೆ ಅನುಗುಣವಾಗಿ ನೀತಿಯಲ್ಲಿನ ಕೆಲವು ಪದಗುಚ್ಛಗಳನ್ನು ತೆಗೆದುಹಾಕುವುದು/ತಿದ್ದುಪಡಿ ಮಾಡುವುದು.