ನವದೆಹಲಿ: ಹಣದುಬ್ಬರ ಪ್ರಮಾಣದ ಇನ್ನೂ ಏರದಂತೆ ತಡೆಯುವುದಕ್ಕಾಗಿ ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆ ಕಡಿತ ಮಾಡಿದ್ದರಿಂದ ಆಗಲಿರುವ 1 ಲಕ್ಷ ಕೋಟಿ ಆದಾಯ ಕೊರತೆ ಸರಿದೂಗಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಇದಕ್ಕಾಗಿ 1 ಲಕ್ಷ ಕೋಟಿ ರೂಪಾಯಿ ಸಾಲ ಮಾಡಲು ತೀರ್ವನಿಸಿದೆ ಎಂದು ಮೂಲಗಳು ತಿಳಿಸಿವೆ.
ರಾಜ್ಯಗಳ ಮೇಲೆ ಪರಿಣಾಮವಿಲ್ಲ: ಅಬಕಾರಿ ಸುಂಕ ಕಡಿತದಿಂದ ಕೇಂದ್ರ ತೆರಿಗೆಯಲ್ಲಿ ರಾಜ್ಯಗಳ ಪಾಲಿನ ಮೇಲೆ ಪರಿಣಾಮ ಬೀರಲಿದೆ ಎಂಬ ಪ್ರತಿಪಕ್ಷಗಳ ಟೀಕೆಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಭಾನುವಾರ ತಿರುಗೇಟು ನೀಡಿದರು. ಪೆಟ್ರೋಲ್ನಲ್ಲಿ ಲೀಟರ್ಗೆ 8 ರೂಪಾಯಿ ಮತ್ತು ಡೀಸೆಲ್ನಲ್ಲಿ 6 ರೂಪಾಯಿ ಕಡಿತ ಮಾಡಲಾಗಿದೆ. ರಸ್ತೆ ಮತ್ತು ಮೂಲಸೌಕರ್ಯದಲ್ಲಿ 2 ಇಂಧನಗಳ ಮೇಲೆ ವಿಧಿಸಲಾದ ಸೆಸ್, ಸಂಗ್ರಹಣೆಯನ್ನು ಎಂದಿಗೂ ರಾಜ್ಯಗಳೊಂದಿಗೆ ಹಂಚಿಕೊಳ್ಳ ಲಾಗಿಲ್ಲ ಎಂದು ವಿತ್ತ ಸಚಿವೆ ಸ್ಪಷ್ಟಪಡಿಸಿದರು.
ಹೇಳಿಕೆ ಹಿಂಪಡೆದ ಚಿದಂಬರಂ: ಅಬಕಾರಿ ಸುಂಕದ ಕಡಿತವು ಕೇಂದ್ರ ತೆರಿಗೆಗಳಲ್ಲಿ ರಾಜ್ಯಗಳ ಪಾಲನ್ನು ಕಡಿಮೆ ಮಾಡುತ್ತದೆ ಎಂದು ಮಾಜಿ ಕೇಂದ್ರ ಹಣಕಾಸು ಸಚಿವ ಪಿ ಚಿದಂಬರಂ ಶನಿವಾರ ಹೇಳಿದ್ದರು. ಭಾನುವಾರ ಚಿದಂಬರಂ ಹೇಳಿಕೆ ಹಿಂಪಡೆದು, ಅಬಕಾರಿ ಸುಂಕ ಕಡಿತದ ಪರಿಣಾಮವು ಕೇಂದ್ರ ಸರ್ಕಾರದ ಮೇಲಷ್ಟೇ ಆಗುತ್ತದೆ. ರಾಜ್ಯಗಳ ಮೇಲಲ್ಲ ಎಂದು ಹೇಳಿದರು.
ತೆರಿಗೆ ಲೆಕ್ಕಾಚಾರ: ನಿರ್ಮಲಾ ಸೀತಾರಾಮನ್ ಅವರು, ಎಲ್ಲರ ಅನುಕೂಲಕ್ಕಾಗಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಗಳ ಕುರಿತು ಕೆಲವು ಉಪಯುಕ್ತ ಸಂಗತಿಗಳನ್ನು ಹಂಚಿಕೊಳ್ಳುತ್ತಿರುವುದಾಗಿ ಟ್ವೀಟ್ನಲ್ಲಿ ತಿಳಿಸಿ ಹೇಳಿದ್ದಿಷ್ಟು- ಮೂಲ ಅಬಕಾರಿ ಸುಂಕ (ಬಿಇಡಿ), ವಿಶೇಷ ಹೆಚ್ಚುವರಿ ಅಬಕಾರಿ ಸುಂಕ (ಎಸ್ಎಇಡಿ), ರಸ್ತೆ ಮತ್ತು ಮೂಲಸೌಕರ್ಯ ಸೆಸ್ (ಆರ್ಐಸಿ) ಮತ್ತು ಕೃಷಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ಸೆಸ್ (ಎಐಡಿಸಿ) ಸೇರಿ ಒಟ್ಟಾಗಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ರೂಪಿಸುತ್ತದೆ. ಮೂಲ ಅಬಕಾರಿ ಸುಂಕಗಳನ್ನು ರಾಜ್ಯಗಳೊಂದಿಗೆ ಹಂಚಿಕೊಳ್ಳಬಹುದಾಗಿದೆ. ಎಸ್ಎಇಡಿ, ಆರ್ಐಸಿ ಮತ್ತು ಎಐಡಿಸಿ ಹಂಚಿಕೆಯಾಗುವುದಿಲ್ಲ.
ಅಭಿವೃದ್ಧಿ ವೆಚ್ಚ: ನರೇಂದ್ರ ಮೋದಿ ಸರ್ಕಾರವು 2014-22ರ ಅವಧಿಯಲ್ಲಿ ಅಭಿವೃದ್ಧಿ ವೆಚ್ಚವಾಗಿ ಒಟ್ಟು 90.9 ಲಕ್ಷ ಕೋಟಿ ರೂಪಾಯಿ ಬಳಸಿಕೊಂಡಿದೆ ಎಂದು ಆರ್ಬಿಐ ಅಂಕಿಅಂಶಗಳು ತೋರಿಸುತ್ತವೆ. ಇದಕ್ಕೆ ವ್ಯತಿರಿಕ್ತವಾಗಿ, 2004-14ರ ಅವಧಿಯಲ್ಲಿ ಕೇವಲ 49.2 ಲಕ್ಷ ಕೋಟಿ ರೂ. ಅಭಿವೃದ್ಧಿಗೆ ಬಳಕೆಯಾಗಿದೆ. ಬಿಜೆಪಿ ಸರ್ಕಾರ ಕಳೆದ ಎಂಟು ವರ್ಷದಲ್ಲಿ ಆಹಾರ, ಇಂಧನ ಮತ್ತು ರಸಗೊಬ್ಬರ ಸಬ್ಸಿಡಿಗಳಿಗಾಗಿ ಬಳಸಿದ 24.85 ಲಕ್ಷ ಕೋಟಿ ರೂ. ಮತ್ತು ಬಂಡವಾಳ ಸೃಷ್ಟಿಗೆ 26.3 ಲಕ್ಷ ಕೋಟಿ ರೂ. ಇದರಲ್ಲಿ ಒಳಗೊಂಡಿದೆ. ಯುಪಿಎಯ 10 ವರ್ಷಗಳಲ್ಲಿ ಕೇವಲ 13.9 ಲಕ್ಷ ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿದೆ ಎಂದು ನಿರ್ಮಲಾ ವಿವರಿಸಿದರು.
ದಾಖಲೆ ಪ್ರಮಾಣದ ಸಾಲ: ಆದಾಯ ಕೊರತೆ ನೀಗಿಸುವುದಕ್ಕಾಗಿ ಕೇಂದ್ರ ಸರ್ಕಾರ ಮಾಡಿರುವ ಸಾಲದ ಬಹುಪಾಲು ಸ್ಥಳೀಯ ಕರೆನ್ಸಿಯಲ್ಲೇ ಇದೆ. ಬ್ಯಾಂಕುಗಳು, ವಿಮಾ ಕಂಪನಿಗಳಿಂದಲೇ ಹೆಚ್ಚಿನ ಪ್ರಮಾಣದ ಸಾಲವನ್ನು ಸರ್ಕಾರ ಬಾಂಡ್ಗಳ ಮೂಲಕ ಪಡೆದುಕೊಂಡಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ 2023ರ ಮಾರ್ಚ್ ಅಂತ್ಯಕ್ಕೆ ಸರ್ಕಾರದ ವರ್ಷದ ಸಾಲ 14.3 ಲಕ್ಷ ಕೋಟಿ ರೂ. ಆಗಬಹುದು ಎಂದು ಅಂದಾಜಿಸಲಾಗಿದೆ.
ರಾಜ್ಯಗಳ ಪಾಲು: ಕೇಂದ್ರ-ರಾಜ್ಯ ತೆರಿಗೆ ಹಂಚಿಕೆ ಸೂತ್ರದ ಪ್ರಕಾರ, ಕೇಂದ್ರವು ಸಂಗ್ರಹಿಸುವ ತೆರಿಗೆಯ 41 ಪ್ರತಿಶತವು ರಾಜ್ಯಗಳಿಗೆ ಹೋಗುತ್ತದೆ. ಆದಾಗ್ಯೂ ಇವುಗಳು ಸೆಸ್ನ ತೆರಿಗೆಯಿಂದ ಸಂಗ್ರಹಣೆಯನ್ನು ಒಳಗೊಂಡಿಲ್ಲ. ಪೆಟ್ರೋಲ್, ಡೀಸೆಲ್ ಮೇಲಿನ ಹೆಚ್ಚಿನ ತೆರಿಗೆ ಸೆಸ್ನಿಂದ ಮಾಡಲ್ಪಟ್ಟಿದೆ. ಶನಿವಾರದ ಕಡಿತದ ಮೊದಲು ಪೆಟ್ರೋಲ್ ಮೇಲಿನ ಕೇಂದ್ರ ತೆರಿಗೆಯ ಒಟ್ಟು ಪ್ರಮಾಣ ಲೀಟರ್ಗೆ 27.90 ರೂ. ಆಗಿದ್ದರೆ, ಮೂಲ ಅಬಕಾರಿ ಸುಂಕವು ಲೀಟರ್ಗೆ 1.40 ರೂ. ಹಾಗೆಯೇ, 21.80 ರೂ.ಗಳಲ್ಲಿ ಡೀಸೆಲ್ನ ಮೇಲಿನ ಒಟ್ಟು ಕೇಂದ್ರ ತೆರಿಗೆ, ಮೂಲ ಅಬಕಾರಿ ಸುಂಕ ಕೇವಲ ರೂ. 1.80. ವಿಶೇಷ ಹೆಚ್ಚುವರಿ ಅಬಕಾರಿ ಸುಂಕವನ್ನು ಪ್ರತಿ ಲೀಟರ್ ಪೆಟ್ರೋಲ್ ಮೇಲೆ 11 ರೂ. ಮತ್ತು ಡೀಸೆಲ್ ಮೇಲೆ 8 ರೂ. ಪ್ರತಿ ಲೀಟರ್ಗೆ 2.50 ರೂ. ಕೃಷಿ ಮೂಲಸೌಕರ್ಯ ಮತ್ತು ಅಭಿವೃದ್ಧಿ ಸೆಸ್ ಅನ್ನು ಪೆಟ್ರೋಲ್ಗೆ ಮತ್ತು ಡೀಸೆಲ್ಗೆ 4 ರೂ. ಪೆಟ್ರೋಲಿಗೆ ಆರ್ಐಸಿ ರೂಪದಲ್ಲಿ ಲೀಟರ್ಗೆ 13 ರೂ. ಹೆಚ್ಚುವರಿ ಅಬಕಾರಿ ಸುಂಕ ವಿಧಿಸಲಾಯಿತು. ಡೀಸೆಲ್ ಪ್ರತಿ ಲೀಟರಿಗೂ ಅಂತಹ 8 ರೂ.ವಿಧಿಸಲಾಯಿತು. ಶನಿವಾರದ ಅಬಕಾರಿ ಕಡಿತದಲ್ಲಿ ಇದನ್ನು ಕಡಿತಗೊಳಿಸಲಾಗಿದೆ. ಪೆಟ್ರೋಲ್ ಮೇಲೆ ಪ್ರತಿ ಲೀಟರ್ ಬಿಇಡಿ ಸಂಗ್ರಹಿಸಲಾದ 1.40 ರೂ. ಮತ್ತು ಡೀಸೆಲ್ ಮೇಲೆ 1.80 ರೂ. ಮಾತ್ರ ರಾಜ್ಯಗಳೊಂದಿಗೆ ಹಂಚಲಾಗುತ್ತದೆ. ಎಸ್ಎಇಡಿ, ಎಐಡಿಸಿ ಮತ್ತು ಆರ್ಐಸಿ ಹಂಚಿಕೆಯಾಗುವುದಿಲ್ಲ ಎಂದು ಸಚಿವೆ ನಿರ್ಮಲಾ ಸೀತಾರಾಮನ್ ವಿವರಿಸಿದರು.
ರಿಗೆ ಲೆಕ್ಕಾಚಾರ: ನಿರ್ಮಲಾ ಸೀತಾರಾಮನ್ ಅವರು, ಎಲ್ಲರ ಅನುಕೂಲಕ್ಕಾಗಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಗಳ ಕುರಿತು ಕೆಲವು ಉಪಯುಕ್ತ ಸಂಗತಿಗಳನ್ನು ಹಂಚಿಕೊಳ್ಳುತ್ತಿರುವುದಾಗಿ ಟ್ವೀಟ್ನಲ್ಲಿ ತಿಳಿಸಿ ಹೇಳಿದ್ದಿಷ್ಟು- ಮೂಲ ಅಬಕಾರಿ ಸುಂಕ (ಬಿಇಡಿ), ವಿಶೇಷ ಹೆಚ್ಚುವರಿ ಅಬಕಾರಿ ಸುಂಕ (ಎಸ್ಎಇಡಿ), ರಸ್ತೆ ಮತ್ತು ಮೂಲಸೌಕರ್ಯ ಸೆಸ್ (ಆರ್ಐಸಿ) ಮತ್ತು ಕೃಷಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ಸೆಸ್ (ಎಐಡಿಸಿ) ಸೇರಿ ಒಟ್ಟಾಗಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ರೂಪಿಸುತ್ತದೆ. ಮೂಲ ಅಬಕಾರಿ ಸುಂಕಗಳನ್ನು ರಾಜ್ಯಗಳೊಂದಿಗೆ ಹಂಚಿಕೊಳ್ಳಬಹುದಾಗಿದೆ. ಎಸ್ಎಇಡಿ, ಆರ್ಐಸಿ ಮತ್ತು ಎಐಡಿಸಿ ಹಂಚಿಕೆಯಾಗುವುದಿಲ್ಲ.