ಶಿಮ್ಲಾ: ಹಿರಿಯ ಕಾಂಗ್ರೆಸ್ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ಪಂಡಿತ್ ಸುಖ್ ರಾಮ್ (94)ನಿಧನರಾಗಿದ್ದಾರೆ . ಕಳೆದ ಮೇ 4 ರಂದು ಮನಾಲಿಯ ನಿವಾಸದಲ್ಲಿ ಬ್ರೈನ್ ಸ್ಟ್ರೋಕ್‍ಗೆ ಒಳಗಾದರು. ತರುವಾಯ, ಅವರನ್ನು ಮಂಡಿಯ ಪ್ರಾದೇಶಿಕ ಆಸ್ಪತ್ರೆಯಲ್ಲಿ ದಾಖಲಿಸಲಾಯಿತು, ಅಲ್ಲಿಂದ ಅವರನ್ನು ಏಮ್ಸಗೆ ಹೆಚಿನ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು.
ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಜೈ ರಾಮ್ ಠಾಕೂರ್ ಅವರು ಮೇ 7 ರಂದು ಹಿರಿಯ ನಾಯಕನನ್ನು ದೆಹಲಿಗೆ ಸಾಗಿಸಲು ರಾಜ್ಯ ಹೆಲಿಕಾಪ್ಟರ್‍ಅನ್ನು ಒದಗಿಸಿದರು.1984 ರಲ್ಲಿ ಲೋಕಸಭೆಗೆ ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದಿಂದ ಸುಖ್ ರಾಮ್ ಆಯ್ಕ ಯಾಗಿದ್ದರು.
ಹಿಮಾಚಲ ಪ್ರದೇಶದಲ್ಲಿ ಪಶುಸಂಗೋಪನೆ ಸಚಿವರಾಗಿದ್ದ ಅವಧಿಯಲ್ಲಿ ಅವರು ಜರ್ಮನಿಯಿಂದ ಹಸುಗಳನ್ನು ತಂದರು, ಇದು ರಾಜ್ಯದ ರೈತರ ಆದಾಯವನ್ನು ಹೆಚ್ಚಿಸಲು ಕಾರಣವಾಯಿತು ಕೇಂದ್ರ ಸಚಿವರಾಗಿದ್ದಾಗ ಭ್ರಷ್ಟಾಚಾರ ಪ್ರಕರಣ ದಾಖಲಾಗಿ ನಂತರ ಐದು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾದರು. ಪ್ರಸ್ತುತ ಸುಖ್ ರಾಮ್ ಅವರ ಪುತ್ರ ಅನಿಲ್ ಶರ್ಮಾ ಮಂಡಿಯಿಂದ ಬಿಜೆಪಿ ಶಾಸಕರಾಗಿದ್ದಾರೆ.