HEALTH TIPS

ಮಕ್ಕಳು ಪಕ್ಷಗಳ ರ್ಯಾಲಿಗಳಲ್ಲಿ ಭಾಗವಹಿಸಿ ಪ್ರಚೋದನಕಾರಿ ಘೋಷಣೆಗಳನ್ನು ಕೂಗುವ ಹೊಸ ಟ್ರೆಂಡ್; ಹೊಸ ಪೀಳಿಗೆ ಧಾರ್ಮಿಕ ದ್ವೇಷದಿಂದ ಬೆಳೆಯುತ್ತಿದೆಯೇ ಎಂದು ಪ್ರಶ್ನಿಸಿದ ಹೈಕೋರ್ಟ್

                 ಕೊಚ್ಚಿ: ಅಲಪ್ಪುಳದಲ್ಲಿ ನಡೆದ ಪಾಪ್ಯುಲರ್ ಫ್ರಂಟ್ ಸಭೆಯಲ್ಲಿ ಪುಟ್ಟ ಮಗುವೊಂದು ಪ್ರಚೋದನಕಾರಿ ಘೋಷಣೆ ಕೂಗಿದ್ದಕ್ಕೆ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ರಾಜಕೀಯ ಪಕ್ಷಗಳ ರ್ಯಾಲಿಗಳಲ್ಲಿ ಭಾಗವಹಿಸಲು ಮಕ್ಕಳನ್ನು ಅನುಮತಿಸÀಬಾರದು ಎಂದು ನ್ಯಾಯಾಲಯ ಕೇಳಿದೆ. ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದ ಅರ್ಜಿಯನ್ನು ಪರಿಗಣಿಸಿದ ನ್ಯಾಯಮೂರ್ತಿ ಪಿ ಗೋಪಿನಾಥ್ ಅವರು ಈ ಉಲ್ಲೇಖವನ್ನು ಮಾಡಿದ್ದಾರೆ.

            ಮಕ್ಕಳು ಪಕ್ಷದ ರ್ಯಾಲಿಗಳಲ್ಲಿ ಭಾಗವಹಿಸಿ ಪ್ರಚೋದನಕಾರಿ ಘೋಷಣೆಗಳನ್ನು ಕೂಗುವ ಹೊಸ ಟ್ರೆಂಡ್ ಈಗಿದೆ. ಅವರು ಧಾರ್ಮಿಕ ದ್ವೇಷವನ್ನು ಮನಸ್ಸಿನಲ್ಲಿಟ್ಟುಕೊಂಡು ಹೊಸ ಪೀಳಿಗೆಯನ್ನು ಬೆಳೆಸುತ್ತಿದ್ದಾರೆಯೇ ಎಂದು ನ್ಯಾಯಾಲಯ ಕೇಳಿದೆ. ಈ ಮಕ್ಕಳ ಮನಸ್ಸು ಬೆಳೆಯುವಾಗ ದ್ವೇಶ ಹೇಗೆ ರೂಪುಗೊಂಡಿತು. ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಧರ್ಮದ ಹೆಸರಿನಲ್ಲಿ ರಾಜಕೀಯ ಮತ್ತು ಧಾರ್ಮಿಕ ರ್ಯಾಲಿಗಳಲ್ಲಿ ಮಕ್ಕಳನ್ನು ಸೇರಿಸಬಹುದೇ ಎಂದು ನ್ಯಾಯಾಲಯ ಕೇಳಿದೆ. ರಾಜಕೀಯ ಪಕ್ಷಗಳ ರ್ಯಾಲಿಗಳಲ್ಲಿ ಮಕ್ಕಳು ಭಾಗವಹಿಸುವುದನ್ನು ಯಾಕೆ ನಿರ್ಬಂಧಿಸಬಾರದು ಎಂದು ನ್ಯಾಯಾಲಯವು ಗಮನಿಸಿದೆ.

               ಮೊನ್ನೆ ಆಲಪ್ಪುಳದಲ್ಲಿ ಪಾಪ್ಯುಲರ್ ಫ್ರಂಟ್ ಆಯೋಜಿಸಿದ್ದ ರ್ಯಾಲಿಯಲ್ಲಿ ಬಾಲಕನೋರ್ವ ವ್ಯಕ್ತಿಯೊಬ್ಬರ ಭುಜದ ಮೇಲೆ ಉದ್ರೇಕಕಾರ ಘೋಷಣೆ ಕೂಗಿದ್ದ.  ಅಕ್ಕಿ, ಹೂವು ಮತ್ತು ಧೂಪವನ್ನು ನಿಮ್ಮಲ್ಲಿಟ್ಟುಕೊಳ್ಳಿ ಶೀಘ್ರ ಅವುಗಳು ಬಳಕೆಗೆ ಬೇಕಾಗಬಹುದು ಎಂದು ಪುಟ್ಟ ಬಾಲಕ ಕಿರುಚುತ್ತಿದ್ದ. 

               ಹಿಂದೂಗಳು ಶವಸಂಸ್ಕಾರಕ್ಕೆ ಬಳಸುವ ಅಕ್ಕಿ, ಹೂವು ಮತ್ತು ಧೂಪವನ್ನು ಖರೀದಿಸಲು ಮತ್ತು ಕ್ರಿಶ್ಚಿಯನ್ನರು ಬಳಸುವ ಧೂಪದ್ರವ್ಯವನ್ನು ಖರೀದಿಸಿ ಜೊತೆಯಲ್ಲಿರಿಸುವಂತೆ ಘೋಷಣೆ ಕೂಗಲಾಗಿತ್ತು.  ಬಾಬರಿಗೆ ಸಾಷ್ಟಾಂಗ ನಮಸ್ಕಾರ ಮಾಡುತ್ತೇನೆ ಎಂಬ ಘೋಷಣೆಗಳನ್ನೂ ಬಾಲಕ ಕೂಗಿದ್ದ.  ಅಯೋಧ್ಯೆಯಲ್ಲಿ ರಾಮಮಂದಿರವನ್ನು ಕೆಡವಿ ಮಸೀದಿ ನಿರ್ಮಿಸಲಾಗುವುದು ಎಂಬ  ಪಾಪ್ಯುಲರ್ ಫ್ರಂಟ್ ಘೋಷಣೆಯನ್ನು ಎತ್ತಿತ್ತು.

                ಇದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಪಾಪ್ಯುಲರ್ ಫ್ರಂಟ್ ನ ಈ ಕ್ರಮವನ್ನು ಟೀಕಿಸಲು ಹಲವು ಪ್ರಮುಖರು ಮುಂದಾಗಿದ್ದರು. ಪೋಲೀಸರು ಎಚ್ಚರಿಕೆ ನೀಡಿದ್ದರೂ ಗಂಭೀರವಾಗಿ ಪರಿಗಣಿಸದ ಹಿನ್ನೆಲೆಯಲ್ಲಿ ವಿಚಾರಣೆ ಆರಂಭಿಸಲಾಗಿತ್ತು. ಕೋಮುಗಲಭೆಗೆ ಸಾರ್ವಜನಿಕವಾಗಿ ಕರೆ ನೀಡಿರುವ ನಾಯಕರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂಬ ಆಗ್ರಹ ನಾನಾ ಕೋನಗಳಿಂದ ಕೇಳಿ ಬರುತ್ತಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries