ಟೋಕಿಯೊ: ಫುಕುಶಿಮಾ ಅಣುಸ್ಥಾವರದ ತ್ಯಾಜ್ಯ ನೀರನ್ನು ಸಮುದ್ರಕ್ಕೆ ಬಿಡುವ ಯೋಜನೆಗೆ ಜಪಾನ್‌ನ ಪರಮಾಣು ನಿಯಂತ್ರಣ ಪ್ರಾಧಿಕಾರ ಬುಧವಾರ ಅನುಮೋದನೆ ನೀಡಿದೆ. ಈ ಸಂಬಂಧ ರೂಪಿಸಿದ್ದ ಕಾರ್ಯಯೋಜನೆಯು ಸುರಕ್ಷಿತ ಮತ್ತು ಪರಿಸರಕ್ಕೆ ಕಡಿಮೆ ಪ್ರಮಾಣದಲ್ಲಿ ಹಾನಿಯುಂಟು ಮಾಡುತ್ತದೆ ಎಂದು ತಿಳಿಸಿದೆ.

ಜಪಾನ್‌ನಲ್ಲಿ 2011ರಲ್ಲಿ ಸಂಭವಿಸಿದ ಸುನಾಮಿಯಿಂದ ಫುಕುಶಿಮಾ ಅಣುಸ್ಥಾವರದ ಕೂಲಿಂಗ್ ವ್ಯವಸ್ಥೆ ನಾಶವಾಗಿ ಮೂರು ರಿಯಾಕ್ಟರ್‌ಗಳು ಕರಗಿದ್ದವು. ಇದರಿಂದಾಗಿ ಅಗಾದ ಪ್ರಮಾಣದ ವಿಕಿರಣ ಸೋರಿಕೆಯಾಗಿತ್ತು. ಹಾನಿಗೊಳಗಾದ ರಿಯಾಕ್ಟರ್‌ಗಳನ್ನು ತಂಪಾಗಿಸಿದ ನೀರನ್ನು ಸುಮಾರು 1000 ಟ್ಯಾಂಕ್‌ಗಳಲ್ಲಿ ಸಂಗ್ರಹಿಸಿಡಲಾಗಿದೆ. ಈ ನೀರನ್ನು ಮುಂದಿನ ವರ್ಷದಿಂದ ಹಂತಹಂತವಾಗಿ ಸಮುದ್ರಕ್ಕೆ ಬಿಡುವ ಬಗ್ಗೆ ಯೋಜನೆ ರೂಪಿಸಲಾಗಿದೆ.
ಆದರೆ, ಭಾರಿ ಪ್ರಮಾಣದಲ್ಲಿ ವಿಕಿರಣಗಳನ್ನು ಒಳಗೊಂಡಿರುವ ಈ ನೀರನ್ನು ಸಮುದ್ರಕ್ಕೆ ಬಿಡುವುದರಿಂದ ಆರೋಗ್ಯ ಸಮಸ್ಯೆಗಳು ಕಾಡಬಹುದು ಎಂಬ ಆತಂಕ ಎದುರಾಗಿದೆ.