ಯೂಕ್ರೇನ್: ಯೂಕ್ರೇನ್ ಮೇಲೆ ರಷ್ಯಾ ದಾಳಿ ನಡೆಸಿ ಮೂರು ತಿಂಗಳು ಗತಿಸಿದೆ. ಇನ್ನೂ ಸಮರ ಮುಗಿದಿಲ್ಲ. ರಷ್ಯಾ ಪಡೆ ದಾಳಿಯನ್ನು ಮುಂದುವರೆಸುತ್ತಿದ್ದು, ಇಡೀ ದೇಶದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ.
ಈ ನಡುವೆಯೇ, ಸುಮಾರು ಎರಡೂವರೆ ಲಕ್ಷ ಭಾರತೀಯರು ಈ ಯುದ್ಧದಿಂದ ಕೆಲಸ ಕಳೆದುಕೊಳ್ಳುವ ಸ್ಥಿತಿಯಲ್ಲಿದ್ದಾರೆ!
ಸೂರತ್‌ನಲ್ಲಿರುವ ವಜ್ರದ ಘಟಕಗಳಲ್ಲಿ ಸುಮಾರು 10 ಲಕ್ಷ ಜನರು ಕೆಲಸ ಮಾಡುತ್ತಿದ್ದಾರೆ. ಉಕ್ರೇನ್-ರಷ್ಯಾ ಯುದ್ಧದಿಂದಾಗಿ ಇದೀಗ ಇವರಿಗೆ ದುಡಿಮೆಯೇ ಇಲ್ಲದಂತಾಗಿದೆ. ಅಮೆರಿಕ ಮತ್ತು ಯುರೋಪ್ಗಳಲ್ಲಿ ಭಾರತದಲ್ಲಿ ಪಾಲಿಶ್ ಮಾಡಿದ ರಷ್ಯಾದ ವಜ್ರಗಳನ್ನು ಸ್ವೀಕರಿಸುವುದನ್ನು ನಿಲ್ಲಿಸಿದ್ದರಿಂದ ಕಂಪನಿಗಳು ನಗದು ಹರಿವು ಮತ್ತು ಪೂರೈಕೆಯಲ್ಲಿ ಕಡಿತ ಉಂಟಾಗಿದೆ ಎಂದು ಗುಜರಾತ್ ಡೈಮಂಡ್ ವರ್ಕರ್ಸ್ ಯೂನಿಯನ್ ಅಧ್ಯಕ್ಷ ರಮೇಶ್ ಜಿಲೇರಿಯಾ ಬೇಸರ ವ್ಯಕ್ತಪಡಿಸಿದ್ದಾರೆ.
ಈ ನಡುವೆ, 'ಡೈಮಂಡ್ ವರ್ಕರ್ಸ್ ಯೂನಿಯನ್ ಗುಜರಾತ್'ನ ಸೂರತ್ ಘಟಕವು ಮೇ 4 ರಂದು ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರಿಗೆ ವಜ್ರ ಕಾರ್ಮಿಕರಿಗೆ ಆರ್ಥಿಕ ನೆರವು ಕೋರಿ ಮನವಿ ಸಲ್ಲಿಸಿದೆ.