HEALTH TIPS

ಮಾವಿನಕಾಯಿ ಚಿತ್ರಾನ್ನ ರೆಸಿಪಿ: ಚಿತ್ರಾನ್ನ ಇಷ್ಟವಿಲ್ಲದವರೂ ಇನ್ನೂ ಬೇಕು ಎಂದು ಹೇಳುವುದು ಗ್ಯಾರಂಟಿ

 ಇದು ಮಾವು ಸೀಸನ್‌, ಈ ಸೀಸನ್‌ನ್‌ ಅಂದ್ರೆ ಮಾವಿನಕಾಯಿ, ಮಾವಿನ ಹಣ್ಣು ಇವುಗಳನ್ನು ಬಳಸಿ ಬಗೆ-ಬಗೆಯ ತಿಂಡಿ-ತಿನಿಸುಗಳನ್ನು ಮಾಡಿ ತಿನ್ನುವ ಸಮಯ. ಅದರಲ್ಲಿ ಹಸಿ ಮಾವಿನಕಾಯಿಂದ ನೀವು ನೂರಕ್ಕ ಅಧಿಕ ಬಗೆಯ ಉಪ್ಪಿಟ್ಟು, ಗೊಜ್ಜು ಅಂತೆಲ್ಲಾ ಮಾಡಿ ಸವಿಯಬಹುದು.


ಇಲ್ಲಿ ಮಾವಿನಕಾಯಿ ಚಿತ್ರಾನ್ನ ರೆಸಿಪಿ ನೀಡಿದ್ದೇವೆ, ನಿಮಗೆ ಚಿತ್ರಾನ್ನ ಇಷ್ಟ ಇದೆಯೋ, ಇಲ್ವೋ ಗೊತ್ತಿಲ್ಲ ಆದರೆ ಈ ಮಾವಿನ ಕಾಯ ಚಿತ್ರಾನ್ನ ಸವಿದರೆ ಮಾತ್ರ ಇನ್ನು ಸ್ವಲ್ಪ ಹಾಕಿಸಿಕೊಂಡು ತಿನ್ನುವುದು ಗ್ಯಾರಂಟಿ. ಬನ್ನಿ ಮಾವಿನ ಕಾಯಿ ಚಿತ್ರಾನ್ನ ಮಾಡುವುದು ಹೇಗೆ ಎಂದು ನೋಡೋಣ:

INGREDIENTS ಬೇಕಾಗುವ ಸಾಮಗ್ರಿ * ಹಸಿ ಮಾವಿನಕಾಯಿ ಸಾಧಾರಣ ಗಾತ್ರದ್ದು (ಅರ್ಧ) ಹುಳಿ ಕಡಿಮೆಯಿರುವ ಮಾವಿನಕಾಯಿ ಆದರೆ 1 ಬಳಸಿ. * ಅಕ್ಕಿ ಒಂದೂವರೆ ಲೋಟ * ನೀರು ಮೂರು ಲೋಟ * 2 ಚಮಚ ಎಣ್ಣೆ * 2 ಈರುಳ್ಳಿ * 4 ಹಸಿ ಮೆಣಸು * ಸ್ವಲ್ಪ ಶೇಂಗಾ * 1 ಚಮಚ ಕಡಲೆ ಬೇಳೆ * 1 ಚಮಚ ಉದ್ದಿನ ಬೇಳೆ * ರುಚಿಗೆ ತಕ್ಕ ಉಪ್ಪು * ಸ್ವಲ್ಪ ಕರಿಬೇವು * ಸ್ವಲ್ಪ ಕೊತ್ತಂಬರಿ ಸೊಪ್ಪು

ಮಾಡುವ ವಿಧಾನ * ಅನ್ನ ಮಾಡಿಡಿ. * ಅನ್ನ ಬೇಯುವ ಹೊತ್ತಿನಲ್ಲಿ ಮಾವಿನ ಕಾಯಿ ಸೊಪ್ಪೆ ಸುಲಿದು ತುರಿದಿಡಿ. ಬೀಜ ಹಾಕಬೇಡಿ. * ಈರುಳ್ಳಿ, ಹಸಿ ಮೆಣಸು ಕತ್ತರಿಸಿ ಇಡಿ. * ಈಗ ಪ್ಯಾನ್‌ ಎಣ್ಣೆ ಹಾಕಿ ಬಿಸಿ ಮಾಡಿ, ಎಣ್ಣೆ ಬಿಸಿಯಾದಾಗ ಕಡಲೆ ಬೀಜ , ಉದ್ದು, ಶೇಂಗಾ ಬೀಜ ಹಾಕಿ ಒಂದೆರಡು ನಿಮಿಷ ಹುರಿತಯಿರಿ, ನಂತರ ಕರಿಬೇವು ಹಾಕಿ ಈರುಳ್ಳಿ, ಹಸಿ ಮೆಣಸು ಹಾಕಿ. * ಈರುಳ್ಳಿ ಸ್ವಲ್ಪ ಫ್ರೈ ಮಾಡಿದರೆ ಸಾಕು, ಈಗ ತುರಿದ ಮಾವಿನಕಾಯಿ ತುರಿ ಹಾಕಿ, ಚಿಕ್ಕ ಚಮಚದಲ್ಲಿ 2 ಚಮಚ (ರುಚಿಗೆ ತಕ್ಕಂತೆ) ಉಪ್ಪು, 1/2 ಚಮಚ ಅರಿಶಿಣ ಪುಡಿ ಹಾಕಿ 5 ನಿಮಿಷ ಬೇಯಿಸಿ ಸ್ಟೌವ್‌ ಆಫ್‌ ಮಾಡಿ. * ಈಗ ರೆಡಿಯಾದ ಗೊಜ್ಜುವಿಗೆ ಅನ್ನ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ಮಾವಿನಕಾಯಿ ಗೊಜ್ಜು ರೆಡಿ.

INSTRUCTIONS ತುಂಬಾ ಹುಳಿ ಇರುವ ಮಾವಿನಕಾಯಿ ಬಳಸಿದರೆ ಒಳ್ಳೆಯದು.




Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries