ಕಾಸರಗೋಡು: ನಗರದ ಬಿ.ಇ.ಎಂ ಪ್ರೌಢ ಶಾಲಾ 1981 -82 ಎಸ್ಸೆಸೆಲ್ಸಿ ಬ್ಯಾಚಿನ ಹಳೇ ವಿದ್ಯಾರ್ಥಿ ವೃಂದ ಆಶ್ರಯದಲ್ಲಿ ಗುರುವಂದನ ಕಾರ್ಯಕ್ರಮ ಜರಗಿತು .ಶಾಲೆಯಲ್ಲಿ ನಡೆದ ಕಾರ್ಯಕ್ರಮ ನಿವೃತ ಮುಖ್ಯ ಶಿಕ್ಷಕ ಸುಬ್ಬಣ್ಣ ಭಟ್ ಉದ್ಘಾಟಿಸಿದರು.
ಈ ಸಂದರ್ಭ 1981 - 82 ವಿಭಾಗಧ ಹಳೇ ವಿದ್ಯಾರ್ಥಿ ಸಂಘಧ ಅದ್ಯಕ್ಷ ಸುರೇಶ್ ಮಲ್ಯ ಅಧ್ಯಕ್ಷ ವಹಿಸಿದ್ದರು .ಬಿ.ಇ.ಎಂ ಹೈಯರ್ ಸೆಕೆಂಡರಿ ಶಾಲೆಯ ಪ್ರಾಂಶುಪಾಲ ರಾಜೇಶ್ಚಂದ್ರ, ಶಾಲೆಯ ಮುಕ್ಯೋಪಧಾಯ ವಿನೀತ್ ವಿನ್ಸೆಂಟ್ ಮುಖ್ಯಅತಿಥಿಯಾಗಿ ಭಾಗವಹಿಸಿರು. ಗುರುವಂದನಾ ಕಾರ್ಯಕ್ರಮದಲ್ಲಿ ನಿವೃತ ಮುಕ್ಯೋಪಾಧ್ಯಾಯ ಸುಬ್ಬಣ್ಣ ಭಟ್,ನಿವೃತ ಅದ್ಯಾಪಕರಾಧ ವನಮಾಲಿನಿ ,ಜಲಜಾಕ್ಷಿ ,ರತ್ನವತಿ ,ಕೃಷ್ಣ ಭಟ್ ,ವೈ .ಸತ್ಯನಾರಾಯಣ ,ನಾರಾಯಣ ಮಣಿಯಾಣಿ ,ಸವಿತಾ ಐ ಭಟ್ ,ಗುರುವಾಯೂರಪ್ಪ, ಮಾಧವ ಹೇರಳ ಅವರನ್ನು ಶಾಲು ಹೊದಿಸಿ. ಸ್ಮರಣಿಕೆ ನೀಡಿ ಗೌರವಿಸಲಾಯಿತು. ಈ ಸಂದರ್ಭ ಅಗಲಿದ ಗುರು ಶ್ರೇಷ್ಠರುಗಳಿಗೆ ನುಡಿನಮನ, ಗುರು ಶ್ರೇಷ್ಠರಿಗೆ ಗೌರವಾರ್ಪಣೆ, ಗುರು ಗುರುಗಳಿಂದ ಆಶೀರ್ವಚನ ನಡೆಯಿತು. ಶಾಲೆಗೆ 1981 -82 ಬ್ಯಾಚಿನ 10 ಬಿ ತರಗತಿಯ ಹಳೇ ವಿದ್ಯಾರ್ಥಿಗಳ ವತಿಯಿಂದ ಪೀಠೋಪಕರಣ ಸಮರ್ಪಿಸಲಾಯಿತು. ಕೆ.ಸತ್ಯನಾರಾಯಣ ತಂತ್ರಿ ಕಾರ್ಯಕ್ರಮ ನಿರೂಪಿಸಿದರು. ಹಳೇ ವಿದ್ಯಾರ್ಥಿ ಸಂಘದ ಪ್ರದಾನ ಕಾರ್ಯದರ್ಶಿ ಶಶಿಧರ ಕೆ ಪಂಡಿತ್ ಪ್ರಾಸ್ತಾವಿಕ ಭಾಷಣ ಮಾಡಿದರು. ಎ.ಪ್ರೇಮಜಿತ್ ಸ್ವಾಗತಿಸಿದರು. ಅನಿತಾ ನಾಯ್ಕ್ ವಂದಿಸಿದರು. ಕಾರ್ಯಕ್ರಮದ ಅಂಗವಾಗಿ ಗಣೇಶ್ ಪ್ರಸಾದ್ ಬಳಗದವರಿಂದ ವಿವಿಧ ಮನೋರಂಜನಾ ಕಾರ್ಯಕ್ರಮ ನಡೆಯಿತು