ಕಾಸರಗೋಡು: ಪ್ರಮುಖ ನಾಗರಿಕ ಹಕ್ಕು ಹಾಗೂ ಪರಿಸರ ಹೋರಾಟಗಾರ್ತಿ ಮೇಧಾ ಪಾಟ್ಕರ್ ಮೇ 22ರಂದು ಜಿಲ್ಲೆಗೆ ಆಗಮಿಸಲಿದ್ದಾರೆ. ಮೇಧಾ ಅವರು ಎಂಡೋಸಲ್ಫಾನ್ ಸಂತ್ರಸ್ತರ ಮನೆಗಳಿಗೆ ಮತ್ತು ಮುಳಿಯಾರಿನ ಎಂಡೋಸಂತ್ರಸ್ತರ ಪುನರ್ವಸತಿ ಉದ್ದೇಶಿತ ಸ್ಥಳಕ್ಕೆ ಭೇಟಿ ನೀಡಲಿದ್ದಾರೆ. ವರ್ಷಗಳ ನಂತರ ಎಂಡೋಸಲ್ಫಾನ್ ಸಂತ್ರಸ್ತರನ್ನು ಭೇಟಿಯಾಗಿ ಅವರ ಅಳಲು ಆಲಿಸಲು ಮೇಧಾ ಪಾಟ್ಕರ್ ಜಿಲ್ಲೆಗೆ ಆಗಮಿಸುತ್ತಿದ್ದಾರೆ.