ನವದೆಹಲಿ: ಜಗತ್ತಿನಾದ್ಯಂತ ಕರೊನಾ ನಾಲ್ಕನೆಯ ಅಲೆಯ ಭೀತಿ ಆವರಿಸಿರುವ ನಡುವೆಯೇ ಅಧ್ಯಯನವೊಂದರ ಆತಂಕಕಾರಿ ಅಂಶವೊಂದು ಹೊರಬಿದ್ದಿದೆ. ಅದರಲ್ಲೂ ಈ ಒಂದು ವರ್ಗದವರು ಕರೊನಾ ಸೋಂಕಿಗೆ ಒಳಗಾದರೆ ಸಾವಿಗೀಡಾಗುವ ಸಾಧ್ಯತೆ ದುಪ್ಪಟ್ಟು ಎಂದು ಈ ಅಧ್ಯಯನ ತಿಳಿಸಿದೆ.

ಮಾಲಿಕ್ಯುಲರ್ ಸೈಕಾಲಜಿ ಎಂಬ ಜರ್ನಲ್ನಲ್ಲಿ ಪ್ರಕಟವಾಗಿರುವ ಅಧ್ಯಯನ ವರದಿ ಈ ಅಂಶವನ್ನು ಹೊರಗೆಡಹಿದೆ. ಮಾನಸಿಕ ಸಮಸ್ಯೆಗಳಿಂದಾಗಿ ಆಸ್ಪತ್ರೆಗೆ ದಾಖಲಾದ 18 ವರ್ಷಕ್ಕೂ ಮೇಲ್ಪಟ್ಟ 1,25,273 ಮಂದಿಯ ವೈದ್ಯಕೀಯ ದಾಖಲೆಗಳ ಅಧ್ಯಯನದಿಂದ ಈ ವಿಷಯ ಬಹಿರಂಗಗೊಂಡಿದೆ.
ಈ ಅಧ್ಯಯನದ ಮುಖ್ಯಸ್ಥ, ಇಸ್ರೇಲ್ನ ಶೇಬಾ ಮೆಡಿಕಲ್ ಸೆಂಟರ್ನ ಸೈಕಿಯಾಟ್ರಿಕ್ ಡಿವಿಷನ್ನ ನಿರ್ದೇಶಕ ಪ್ರೊ. ಮಾರ್ಕ್ ವೀಸರ್ ಹೇಳುವ ಪ್ರಕಾರ, ಮಾನಸಿಕ ಸಮಸ್ಯೆಯ ಇತಿಹಾಸ ಇರುವ ರೋಗಿಗಳು ಕೋವಿಡ್ ಸೋಂಕಿಗೆ ಒಳಗಾದಾಗ ವೈದ್ಯರು ಅತಿ ಹೆಚ್ಚಿನ ಗಮನ ಹರಿಸಬೇಕು ಎಂದು ತಿಳಿಸಿದ್ದಾರೆ. ಮಾನಸಿಕ ಸಮಸ್ಯೆ ಉಳ್ಳ ಕೋವಿಡ್ ಸೋಂಕಿತರ ಮಾಹಿತಿ ತಮ್ಮ ದೇಶದಲ್ಲಿ ಮಾತ್ರ ಸಂಗ್ರಹಿಸಿದ್ದು, ಅದರ ಅಧ್ಯಯನ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.
ಮಾನಸಿಕ ಸಮಸ್ಯೆಗಳಿಗಾಗಿ ದೀರ್ಘ ಕಾಲದಿಂದ ಚಿಕಿತ್ಸೆ ಪಡೆದವರು ಕರೊನಾ ಸೋಂಕಿತರಾದರೆ ವ್ಯತಿರಿಕ್ತ ಪರಿಣಾಮಗಳನ್ನು ಎದುರಿಸುವ ಸಾಧ್ಯತೆ ಅಧಿಕ. ಇಂಥವರು ಸೋಂಕಿತರಾದರೆ ಆಸ್ಪತ್ರೆಗೆ ದಾಖಲಿಸಬೇಕಾದ ಸಾಧ್ಯತೆ ದುಪ್ಪಟ್ಟು ಹಾಗೂ ಸಾಯುವ ಸಾಧ್ಯತೆಯೂ ದುಪ್ಪಟ್ಟು. ಹೀಗಾಗಿ ಆಡಳಿತ ವ್ಯವಸ್ಥೆ ಇಂಥವರು ಸೋಂಕಿಗೆ ಒಳಗಾಗದಂತೆ ಹೆಚ್ಚಿನ ನಿಗಾ ವಹಿಸಬೇಕು ಎಂದು ಪ್ರೊ. ಮಾರ್ಕ್ ವೀಸರ್ ತಿಳಿಸಿದ್ದಾರೆ.