ಕೊಚ್ಚಿ: ಉಪಚುನಾವಣೆಗೆ ಒಂದೇ ದಿನ ಬಾಕಿ ಇರುವಾಗ ತೃಕ್ಕಾಕರದಲ್ಲಿ ಚುನಾವಣಾ ಪೂರ್ವ ಸಮೀಕ್ಷೆಗಳು ನಡೆದಿವೆ ಎಂದು ವರದಿಯಾಗಿದೆ. ಚುನಾವಣೆಗೂ ಮುನ್ನ ಇಂತಹ ಸಮೀಕ್ಷೆಗಳನ್ನು ನಡೆಸದಂತೆ ಮುಖ್ಯ ಚುನಾವಣಾಧಿಕಾರಿ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದರು. ಇದನ್ನು ವಾಟ್ಸಾಪ್ ಮೂಲಕ ನಡೆಸಿದ ಸಮೀಕ್ಷೆ ಮೀರಿಸಿದೆ. ಇಂತಹ ಕೃತ್ಯಗಳನ್ನು ಎಸಗುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಮತ್ತು ಪೋಲೀಸರಿಗೆ ಮಾಹಿತಿ ಹಸ್ತಾಂತರಿಸಲಾಗಿದೆ ಎಂದು ಎರ್ನಾಕುಳಂ ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಈ ಹಿಂದೆ ಚುನಾವಣಾ ಆಯೋಗವು ಚುನಾವಣಾ ಪೂರ್ವ ಸಮೀಕ್ಷೆಗಳ ಮೇಲೆ ಕಟ್ಟುನಿಟ್ಟಿನ ನಿಷೇಧವನ್ನು ಘೋಷಿಸಿತ್ತು. ಆದರೆ, ಇದನ್ನು ಉಲ್ಲಂಘಿಸಿ ವಾಟ್ಸ್ ಆಪ್ ಮತ್ತಿತರ ವಿಧಾನಗಳಲ್ಲಿ ಸಮೀಕ್ಷೆ ನಡೆಸುತ್ತಿರುವುದು ಗಮನಕ್ಕೆ ಬಂದಿದೆ. ಈ ರೀತಿ ವರ್ತಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ ಪೋಲೀಸರಿಗೆ ಮಾಹಿತಿ ನೀಡಲಾಗಿದೆ’ ಎಂದು ಜಿಲ್ಲಾಧಿಕಾರಿ ತಿಳಿಸಿರುವರು.
ತೃಕ್ಕಾಕರ ಉಪಚುನಾವಣೆ ಅಥವಾ ಇತರ ಯಾವುದೇ ಚುನಾವಣಾ ಸಮೀಕ್ಷೆಗೆ ಸಂಬಂಧಿಸಿದ ಅಭಿಪ್ರಾಯ ಸಂಗ್ರಹ ಸೇರಿದಂತೆ ಯಾವುದೇ ಚುನಾವಣಾ ವಿಷಯಗಳನ್ನು ಎಲೆಕ್ಟ್ರಾನಿಕ್ ಮಾಧ್ಯಮಗಳ ಮೂಲಕ ಹಂಚಿಕೊಳ್ಳಬಾರದು ಎಂದು ಸೂಚಿಸಲಾಗಿದೆ. 29ರ ಸಂಜೆ 6ರಿಂದ ಇಂದು ಸಂಜೆ 6ರವರೆಗೆ ಪ್ರಚಾರ-ಪ್ರದರ್ಶನಕ್ಕೂ ನಿಬರ್ಂಧ ಹೇರಲಾಗಿತ್ತು.