ಕಾಸರಗೋಡು: ಎಂಡೋಸಲ್ಫಾನ್‍ನಿಂದ ಬಳಲುತ್ತಿದ್ದ ಮಗಳನ್ನು ಕೊಂದು ತಾಯಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಕಾಸರಗೋಡು ಬಳಂತೋಡು ಚಾಮುಂಡಿಕುನ್ನು ಎಂಬಲ್ಲಿ ಈ ಘಟನೆ ನಡೆದಿದೆ. 28 ವರ್ಷದ ರೇಷ್ಮಾಳನ್ನು ಆಕೆಯ ತಾಯಿ ವಿಮಲಾ ಕೊಲೆ ಮಾಡಿದ್ದಾಳೆ. ಬಳಿಕ ಅವರು ಆತ್ಮಹತ್ಯೆ ಮಾಡಿಕೊಂಡರು.
ರೇಷ್ಮಾ ಹಾಸಿಗೆಯಲ್ಲಿ ಶವವಾಗಿ ಮತ್ತು ತಾಯಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ವಿಮಲಾ ರಾಜಪುರಂ ಶಾಲೆಯಲ್ಲಿ ಅಡುಗೆ ಕೆಲಸ ಮಾಡುತ್ತಿದ್ದಳು. ಪೋಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ಆರಂಭಿಸಿದ್ದಾರೆ. ಮಹಜರಿನ ನಂತರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿಯಲಾಗದಿದ್ದರೂ ಪುತ್ರಿಯ ಜೀವ ಪರ್ಯಂತದ ಎಂಡೋ ಸಂಕಷ್ಟಗಳೇ ಕಾರಣ ಎನ್ನಲಾಗಿದೆ.