ಮಧೂರು: ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ ಕಾಸರಗೋಡು ವತಿಯಿಂದ ಸುಮಾರು ಎರಡು ಕೋಟಿ ವೆಚ್ಚದಲ್ಲಿ ಸಿರಿಬಾಗಿಲಿನಲ್ಲಿ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಭವನ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು ಪ್ರತಿಷ್ಠಾನದ ಕಾರ್ಯ ಯೋಜನೆಗಳನ್ನು ಬೆಂಬಲಿಸಿ ನಾಡ ಹೊರನಾಡ ಕಲಾಪ್ರೇಮಿ ದಾನಿಗಳು ಉದಾರ ಸಹಾಯ ಸಹಕಾರವನ್ನು ನೀಡುತ್ತಿದ್ದು ಪ್ರತಿಷ್ಠಾನದ ಗೌರವ ಮಾರ್ಗದರ್ಶಕ, ಉದ್ಯಮಿ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜ ಅವರು ಇತ್ತೀಚೆಗೆ ರೂ. ಒಂದು ಲಕ್ಷ ವನ್ನು ಉದಾರ ದಾನವಾಗಿ ನೀಡಿದ್ದಾರೆ ಎಂದು ಪ್ರತಿಷ್ಠಾನದ ಪ್ರಕಟಣೆ ತಿಳಿಸಿದೆ.