HEALTH TIPS

ವಿಪಿಎನ್ ಬಳಕೆದಾರರ ಮಾಹಿತಿ ಸಂಗ್ರಹಿಸಲು ಸೇವಾ ಪೂರೈಕೆದಾರರಿಗೆ ಕೇಂದ್ರದ ಸೂಚನೆ

              ನವದೆಹಲಿ :ವರ್ಚುವಲ್ ಪ್ರೈವೇಟ್ ನೆಟ್‍ವರ್ಕ್ ಅಥವಾ ವಿಪಿಎನ್ ಸೇವೆಗಳನ್ನು ಒದಗಿಸುವ ಕಂಪೆನಿಗಳು ಭಾರತೀಯ ಬಳಕೆದಾರರ ಕುರಿತಾದ ಮಾಹಿತಿಯನ್ನು ಸಂಗ್ರಹಿಸಿ ಐದು ವರ್ಷಗಳವರೆಗೆ ಇರಿಸಿಕೊಳ್ಳಬೇಕೆಂದು ಭಾರತ ಸರಕಾರ ಆದೇಶಿಸಿದೆ ಎಂದು ವರದಿಯಾಗಿದೆ.

              ಇದೀಗ ಭಾರತ ಸರಕಾರದ ಸೂಚನೆಯಂತೆ ವಿಪಿಎನ್ ಸೇವಾ ಪೂರೈಕೆದಾರರು ತಮ್ಮ ಬಳಕೆದಾರರ ಹೆಸರು, ವಿಳಾಸ, ಸಂಪರ್ಕ ಸಂಖ್ಯೆಗಳು, ಚಂದಾದಾರಿಕೆ ಅವಧಿ, ಇಮೇಲ್ ಮತ್ತು ಐಪಿ ವಿಳಾಸ ಮತ್ತು ಈ ಸೇವೆ ಬಳಕೆಗೆ ಕಾರಣಗಳನ್ನು ಸಂಗ್ರಹಿಸಿ ಇರಿಸಿಕೊಳ್ಳಬೇಕಿದೆ. ಎಪ್ರಿಲ್ 28ರಂದು ಈ ಕುರಿತಂತೆ ಇಂಡಿಯನ್ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಂ ಹಲವಾರು ಹೊಸ ನಿಯಮಗಳನ್ನು ಜಾರಿಗೊಳಿಸಿದೆ.

               ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಧೀನದಲ್ಲಿ ಕಾರ್ಯಾಚರಿಸುವ ಈ ಸಂಸ್ಥೆ ಸೈಬರ್ ಭದ್ರತೆ ಅಪಾಯಗಳಿಗೆ ಸಂಬಂಧಿಸಿದ ನೋಡಲ್ ಏಜನ್ಸಿಯಾಗಿದೆ. ಹೊಸ ನಿಯಮಗಳು ಜೂನ್ ಅಂತ್ಯದಿಂದ ಅನ್ವಯವಾಗಲಿದ್ದು ಕ್ಲೌಡ್ ಸೇವಾ ಪೂರೈಕೆದಾರರು ಮತ್ತು ವಿಪಿಎನ್ ಪೂರೈಕೆದಾರರು ಇದನ್ನು ಪಾಲಿಸಬೇಕಿದೆ.

             ವಿಪಿಎನ್‍ಗಳು ಬಳಕೆದಾರರಿಗೆ ತಮ್ಮ ಸ್ಥಳವನ್ನು ಅಡಗಿಸಿ ನಂತರ ತಮ್ಮ ಶೋಧ ಇತಿಹಾಸವನ್ನು ಇಂಟರ್ನೆಟ್ ಸೇವಾ ಪೂರೈಕೆದಾರರಿಗೆ ಬಹಿರಂಗಪಡಿಸದೆ ಅಂತರ್ಜಾಲವನ್ನು ಬ್ರೌಸ್ ಮಾಡಲು ಅವಕಾಶ ಕಲ್ಪಿಸುತ್ತದೆ, ಈ ಪರಿಕರವನ್ನು ತನಿಖಾ ಪತ್ರಕರ್ತರು ಮತ್ತು ಎಥಿಕಲ್ ಹ್ಯಾಕರ್‍ಗಳು ಬಳಸಿ ತಮ್ಮ ದೇಶಗಳಲ್ಲಿ ನಿಷೇಧಿಸಲಾಗಿರುವ ವೆಬ್‍ಸೈಟ್‍ಗಳನ್ನು ಪ್ರವೇಶಿಸುತ್ತಾರೆ.

ಜನರು ಹೊಂದಿರುವ ವರ್ಚುವಲ್ ಸ್ವತ್ತುಗಳು ಏರಿಕೆಯಾಗುತ್ತಿರುವುದರಿಂದ ಅವರ ಡೇಟಾ, ಹಕ್ಕುಗಳನ್ನು ರಕ್ಷಿಸಲು ಹಾಗೂ ಪಾವತಿ ವೇಳೆ ಸುರಕ್ಷತೆಗಾಗಿ ಈ ಕ್ರಮಕೈಗೊಳ್ಳಲಾಗುತ್ತಿದೆ ಎಂಬ ಕಾರಣ ನೀಡಲಾಗಿದೆ.

               ನಿಯಮ ಪಾಲಿಸದ ಸಂಸ್ಥೆಗಳು ಐಟಿ ಕಾಯಿದೆಯ ಸೆಕ್ಷನ್ 70ಬಿ ಇದರ ಉಪಸೆಕ್ಷನ್ (7) ಅನ್ವಯ ಕಾನೂನು ಕ್ರಮ ಎದುರಿಸಲಿವೆ, ಈ ನಿಬಂಧನೆಯನ್ವಯ ಒಂದು ವರ್ಷ ತನಕ ಜೈಲು, ಒಂದು ಲಕ್ಷ ತನಕ ದಂಡ ಅಥವಾ ಎರಡನ್ನೂ ಹೇರಬಹುದಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries