ನವದೆಹಲಿ: ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ಮಾರ್ಚ್ 3 ರಂದು ಕೇರಳಕ್ಕೆ ಆಗಮಿಸಲಿದ್ದಾರೆ. ಸುರೇಶ್ ಗೋಪಿ ಅವರ ಕೋರಿಕೆಯ ಮೇರೆಗೆ ಸ್ಮೃತಿ ಇರಾನಿ ಆದಿವಾಸಿಗಳ ಸಂಕಷ್ಟವನ್ನು ಪರಿಹರಿಸಲು ವಯನಾಡಿಗೆ ಆಗಮಿಸುವರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರ ಅಧಿಕೃತ ಭೇಟಿ ಇದಾಗಿದೆ.
ರಾಹುಲ್ ಗಾಂಧಿ ಅವರ ಕ್ಷೇತ್ರದಲ್ಲಿ ಆದಿವಾಸಿಗಳ ಸಂಕಷ್ಟದ ಅಧ್ಯಯನಕ್ಕೆ ಕೇಂದ್ರ ವಿಶೇಷ ತಂಡವನ್ನು ನೇಮಿಸಲಿದೆ. ಕಳೆದ ತಿಂಗಳು ರಾಜ್ಯಸಭೆಯಲ್ಲಿ ಸುರೇಶ್ ಗೋಪಿ ಈ ವಿಷಯ ಪ್ರಸ್ತಾಪಿಸಿದ್ದರು. ನಂತರ ನಡೆದ ಚರ್ಚೆಯಲ್ಲಿ ಸುರೇಶ್ ಗೋಪಿ ಈ ಭರವಸೆ ಪಡೆದರು.
ಮೇ 3 ರಂದು ಬೆಳಗ್ಗೆ ವಯನಾಡ್ ಕಲೆಕ್ಟರೇಟ್ ನಲ್ಲಿ ಸ್ಮೃತಿ ಇರಾನಿ ಅವರನ್ನು ಬರಮಾಡಿಕೊಳ್ಳಲಾಗುವುದು. ಮಿನಿ ಸಮ್ಮೇಳನ ಸಭಾಂಗಣದಲ್ಲಿ ನಡೆಯಲಿರುವ ಜಿಲ್ಲಾ ಪರಿಶೀಲನಾ ಸಭೆಗೂ ಸಚಿವರು ಆಗಮಿಸಲಿದ್ದಾರೆ. ನಂತರ ಕಲ್ಪೆಟ್ಟ ಪುರಸಭೆಯ ಮರವಯಲ್ ಗಿರಿಜನ ವಸತಿ ಕಾಲೋನಿ, ಒಂದನೇ ವಾರ್ಡ್ ನ ಪೆÇನ್ನಾಡ ಅಂಗನವಾಡಿಗೆ ಹಾಗೂ ಕನ್ಯಾಂಪಟ್ಟ ಗ್ರಾ.ಪಂ.ವ್ಯಾಪ್ತಿಯಲ್ಲಿ ಸಿಎಸ್ ಆರ್ ನಿಧಿಯಿಂದ ನಿರ್ಮಿಸಿರುವ ವರದೂರು ಸ್ಮಾರ್ಟ್ ಅಂಗನವಾಡಿಗೆ ಭೇಟಿ ನೀಡಲಿದ್ದಾರೆ.
ಸಂಜೆ ಕಲ್ಪೆಟ್ಟದ ಪಿಡಬ್ಲ್ಯುಡಿ ರೆಸ್ಟ್ ಹೌಸ್ ಕಾನ್ಫರೆನ್ಸ್ ಹಾಲ್‍ನಲ್ಲಿ ಸುದ್ದಿಗೋಷ್ಠಿ ನಡೆಸಿ ವಾಪಸಾಗಲಿದ್ದಾರೆ.