ಕಾಸರಗೋಡು: ಕೊಲ್ಲಂ ಚವರದ ಭಾರತೀಯ ಮೂಲಸೌಕರ್ಯ ಮತ್ತು ನಿರ್ಮಾಣ ಸಂಸ್ಥೆ(ಐಐಐಸಿ) ನೆದಲ್ಯಾರ್ಂಡ್ಸ್ ಮೂಲದ ಕಂಪನಿಯ ಸಹಯೋಗದೊಂದಿಗೆ ಕಾರ್ಯಾಚರಿಸಲಿದ್ದು, ಜಾಗತಿಕ ಮಟ್ಟದಲ್ಲಿ ಖ್ಯಾತಿಗಳಿಸಿರುವ ಪೇಂಟ್ ತಯಾರಕ ಸಂಸ್ಥೆ ಆಕ್ಸೊ ನೋಬಲ್, ನೆದಲ್ಯಾರ್ಂಡ್ಸ್ ಕಂಪನಿ, ಕೇರಳ ಸರ್ಕಾರದ ಅಡಿಯಲ್ಲಿ IIIಅ ಮತ್ತು ರಿಯಲ್ ಎಸ್ಟೇಟ್ ಡೆವಲಪರ್ಸ್ ಅಸೋಸಿಯೇಷನ್ಸ್ ರಾಷ್ಟ್ರೀಯ ಒಕ್ಕೂಟ (ಸಿಆರ್‍ಇಡಿಎಐ) ಜಂಟಿಯಾಗಿ ಚಟುವಟಿಕೆ ನಡೆಸಲು ತೀರ್ಮಾನಿಸಿದೆ.
ನಿರ್ಮಾಣ ವಲಯ ಮತ್ತು ಪೇಂಟಿಂಗ್ ಕ್ಷೇತ್ರದಲ್ಲಿ ತರಬೇತಿ ನೀಡುವ ಮೂಲಕ ವರ್ಷಕ್ಕೆ 200 ಜನರಿಗೆ ಉದ್ಯೋಗ ನೀಡುವ ಗುರಿಯನ್ನು ಸಂಸ್ಥೆ ಹೊಂದಿದೆ. ಕನ್‍ಸ್ಟ್ರಕ್ಷನ್ ಪೇಂಟರ್ ಹೆಲ್ಪರ್ ಲೆವೆಲ್-2 ಎಂಬ ರಾಷ್ಟ್ರೀಯ ಪ್ರಾಮುಖ್ಯವುಳ್ಳ ಕೌಶಲ್ಯ ತರಬೇತಿ ಕೋರ್ಸ್ ಇದಾಗಿದೆ. ಕಂಪನಿ ಕಾರ್ಯದರ್ಶಿ ಮತ್ತು ಅನುಸರಣೆ ಅಧಿಕಾರಿ ಡಾ. ಹರ್ಷಿ ರಸ್ತೋಗಿ, ಆಕ್ಸೊ ನೋಬಲ್ ಇಂಡಿಯಾದ ಬಿ ಸುನೀಲ್ ಕುಮಾರ್, ಕ್ರಾಡೈ ಕೇರಳದ ಕನ್ವೀನರ್ ಜನರಲ್ ಮತ್ತು ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯ ಎಸ್.ಎನ್. ರಘುಚಂದ್ರನ್ ನಾಯರ್ ತ್ರಿಪಕ್ಷೀಯ ಒಪ್ಪಂದ ಪತ್ರಕ್ಕೆ ಸಹಿ ಹಾಕಿದರು. ನೆದಲ್ಯಾರ್ಂಡ್ಸ್ ರಾಯಭಾರಿ ಮಾರ್ಟಿನ್ ವ್ಯಾನ್ ಡೆನ್ ಬರ್ಗ್, ಮುಖ್ಯಮಂತ್ರಿ ಪಿಣರಾಯಿವಿಜಯನ್ ಮತ್ತು ಉನ್ನತ ಶಿಕ್ಷಣ ಸಚಿವ ಆರ್. ಬಿಂದು, ಕಾರ್ಮಿಕ ಸಚಿವ ವಿ. ಶಿವನ್ ಕುಟ್ಟಿ, ಮುಖ್ಯ ಕಾರ್ಯದರ್ಶಿ ಸೇರಿದಂತೆ ಹಿರಿಯ ಅಧಿಕಾರಿಗಳ ಉಪಸ್ಥಿತಿಯಲ್ಲಿ ಸಹಿ ಹಾಕಲಾಯಿತು. ತರಬೇತಿಯು ಕೊಲ್ಲಂ ಜಿಲ್ಲೆಯ ಚವರದ ಐಐಐಸಿನಲ್ಲಿ ನಡೆಯಲಿದ್ದು, ಕೋರ್ಸ್‍ನ ಅವಧಿ 26 ದಿನಗಳಾಗಿದೆ. ಒಂದು ಬ್ಯಾಚ್‍ನಲ್ಲಿ 25 ಜನರಿಗೆ ಪ್ರವೇಶಾವಕಾಶವಿದ್ದು, ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದವರಿಗೆ ಉದ್ಯೋಗವನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ಮೂರು ಸಂಸ್ಥೆಗಳು ಉಪಕ್ರಮವನ್ನು ತೆಗೆದುಕೊಳ್ಳುತ್ತಿದೆ. ಅರ್ಜಿದಾರರು 18 ವರ್ಷ ಮೇಲ್ಪಟ್ಟವರಾಗಿರಬೇಕು ಮತ್ತು 10 ನೇ ತರಗತಿ ಉತ್ತೀರ್ಣರಾಗಿರಬೇಕು. ವಸತಿ ಅಗತ್ಯವಿಲ್ಲದವರಿಗೆ 8,000 ರೂ. ಮತ್ತು ವಸತಿ ಅಗತ್ಯವಿರುವವರಿಗೆ 14,000 ರೂ. ಶುಲ್ಕ ಹೊಂದಿದ್ದು, ಅರ್ಜಿ ಸಲ್ಲಿಸಲು ಇಚ್ಛಿಸುವವರು ಜೂನ್ 3ರ ಒಳಗೆ ನೋಂದಾಯಿಸಿಕೊಳ್ಳಬೇಕು. ಈ ಬಗ್ಗೆ ಹೆಚ್ಚಿನ ಮಾಃಇತಿಗೆ ದೂರವಾಣಿ 8078980000 ಅಥವಾ ವೆಬ್‍ಸೈಟ್ www.iiic.ac.in ಮೂಲಕ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.