ಕುಂಬಳೆ: ಪತ್ನಿಯನ್ನು ಲೈಂಗಿಕ ಜಾಲದಲ್ಲಿ ಸಿಲುಕಿಸಿರುವರೆಂದು ಪತಿ ಕುಂಬಳೆಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಆರೋಪಿಸಿರುವರು.
ಉಪ್ಪಳದ ನಡೆದ ಅಲ್ತಾಫ್ ಹತ್ಯೆ ಪ್ರಕರಣದ ಮೊದಲ ಆರೋಪಿ ಮೊಯಿದ್ದೀನ್ ಶಬೀರ್ ಎಂಬಾತ ಈ ಆರೋಪ ಮಾಡಿದ್ದಾನೆ. ಕುಂಬಳೆ ಪ್ರೆಸ್ ಪೋರಂ ನಲ್ಲಿ ಭಾನುವಾರ ಸಂಜೆ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಇದೇ ಪ್ರಕರಣದ ಸಹ ಆರೋಪಿ ಜಲೀಲ್ ವಿರುದ್ಧ ಅವರು ಆರೋಪ ಮಾಡಿದರು.
ಮೊಯ್ದೀನ್ ಶಬೀರ್ ಅವರ ಪತ್ನಿಯ ಮಲತಂದೆ ಅಲ್ತಾಪ್. ಶಬೀರ್ ಅವರೇ ತಮ್ಮ ಸ್ನೇಹಿತರೊಂದಿಗೆ ಅಕ್ರಮ ಸಂಬಂಧಕ್ಕೆ ಪ್ರಚೋದನೆ ನೀಡುತ್ತಿದ್ದಾರೆ ಎಂದು ಆರೋಪಿಸಿ ಆತನ ಪತ್ನಿ ಕುಂಬಳೆ ಪೋಲೀಸರಿಗೆ ದೂರು ನೀಡಿದ್ದರು. ಠಾಣೆಯಿಂದ ಹಿಂತಿರುಗಿದ ತನ್ನ ಪತ್ನಿಯನ್ನು ದಾರಿಯಲ್ಲಿ ನಿಲ್ಲಿಸಿ ತನ್ನೊಂದಿಗೆ ಬರುವಂತೆ ಕೇಳಿಕೊಂಡರೂ, ಆಕೆ ಅವಿಧೇಯಳಾಗಿ ವರ್ತಿಸಿದ್ದು, ಜಲೀಲ್ ಸಹ ಮಿತ್ರರಾದ ಅಪ್ಪಿ, ಅಲ್ತಾಫ್ ಮತ್ತು ರಿಯಾ ಅವರ ಸಹಾಯದಿಂದ ಆಕೆಯನ್ನು ಕಾರಿನಲ್ಲಿ ಪ್ರಶ್ನಿಸಲು ಕರೆದೊಯ್ದೆವು ಎಂದು ಶಬೀರ್ ಹೇಳಿದರು. ಅಲ್ತಾಫ್ ಜೊತೆ ಹಿಂಬದಿಯ ಸೀಟಿನಲ್ಲಿ ಜಲೀಲ್ ಮತ್ತು ಅಪ್ಪಿ ಕುಳಿತಿದ್ದು, ಕಾರಿನಲ್ಲಿ ಸಂಚರಿಸುತ್ತಿದ್ದಾಗ ಮಾತಿಗೆ ಮಾತು ಬೆಳೆದು ಅಲ್ತಾಫ್ ಗೆ ಜಲೀಲ್ ಚಾಕುವಿನಿಂದ ಇರಿದಿದ್ದು, ಅಲ್ತಾಫ್ ಕೊನೆಯುಸಿರೆಳೆದಿದ್ದರು.
ಬಳಿಕ ಪೋಲೀಸರು ಶಬೀರ್ ನನ್ನು ಬಂಧಿಸಿ ನಾಲ್ಕು ತಿಂಗಳ ಜೈಲುವಾಸ ಶಿಕ್ಷೆ ಮುಗಿಸಿ ವಾಪಸಾಗಿದ್ದು, ಕಳೆದ ಎರಡು ವರ್ಷಗಳಿಂದ ಪತ್ನಿಯಿಂದ ಅಗಲಿ ಬದುಕುತ್ತಿರುವುದಾಗಿ ಶಬೀರ್ ತಿಳಿಸಿದರು. ಇತ್ತೀಚೆಗಷ್ಟೇ ತನ್ನ ಪತ್ನಿಗೆ ಸ್ನೇಹಿತನೊಬ್ಬ ಲೈಂಗಿಕ ದೌರ್ಜನ್ಯ ಎಸಗಿರುವುದು ತಿಳಿದುಬಂದಿದ್ದು, ಜೊತೆಗೆ ತನ್ನ ಪತ್ನಿಯನ್ನು ಡ್ರಗ್ಸ್ ದಂಧೆಗೆ ಬಳಸಿಕೊಳ್ಳುತ್ತಿದ್ದಾರೆ ಎಂದು ಶಬೀರ್ ಆರೋಪಿಸಿದ್ದಾರೆ.
ತಮಗೆ ಏಳು ಮತ್ತು ಐದು ವರ್ಷ ಹರೆಯದ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಅವರು ಎಲ್ಲಿದ್ದಾರೆ ಎಂಬುದು ನನಗೆ ತಿಳಿದಿಲ್ಲ ಮತ್ತು ಮಕ್ಕಳನ್ನು ಅಂತಹ ಬಲೆಗಳಿಂದ ರಕ್ಷಿಸಲು ಪ್ರಯತ್ನಿಸುತ್ತಿರುವೆ ಎಂದು ಶಬೀರ್ ಸುದ್ದಿಗೋಷ್ಠಿಯಲ್ಲಿ ಹೇಳಿದರು.