ತಿರುವನಂತಪುರ: ಮಾಜಿ ಕೇಂದ್ರ ಸಚಿವ ಕೆವಿ ಥಾಮಸ್ ಅವರನ್ನು ಕಾಂಗ್ರೆಸ್ ನಿಂದ ಉಚ್ಛಾಟಿಸಲಾಗಿದೆ. ತೃಕ್ಕಾಕರ ಉಪಚುನಾವಣೆಯಲ್ಲಿ ಎಲ್‍ಡಿಎಫ್ ಸಮಾವೇಶದಲ್ಲಿ ಪಾಲ್ಗೊಂಡು ಕೇರಳದ ಕಾಂಗ್ರೆಸ್ ನಾಯಕರನ್ನು ಅವಮಾನಿಸಿದ ಬಳಿಕ ಈ ಕ್ರಮ ಕೈಗೊಳ್ಳಲಾಗಿದೆ.
ಎಐಸಿಸಿ ಅನುಮತಿ ಮೇರೆಗೆ ಉಚ್ಛಾಟನೆ ಮಾಡಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಕೆ. ಸುಧಾಕರನ್ ಮಾಹಿತಿ ನೀಡಿರುವರು. ಇನ್ನು ಕಾಯಲು ಸಾಧ್ಯವಿಲ್ಲ ಎಂದರು. ಕೆ.ವಿ.ಥಾಮಸ್ ಅವರ ಕ್ರಮದ ಮಾಹಿತಿ ನೀಡಲಾಗಿದೆ ಎಂದು ಸುಧಾಕರನ್ ಸ್ಪಷ್ಟಪಡಿಸಿದ್ದಾರೆ.
ಇದಕ್ಕೂ ಮುನ್ನ ಪಕ್ಷದ ಸೂಚನೆ ಮೀರಿ ಸಿಪಿಎಂ ಪಕ್ಷದ 23ನೇ ಕಾಂಗ್ರೆಸ್ ಅಂಗವಾಗಿ ಕಣ್ಣೂರಿನಲ್ಲಿ ನಡೆದ ವಿಚಾರ ಸಂಕಿರಣದಲ್ಲಿ ಕೆವಿ ಥಾಮಸ್ ಭಾಗವಹಿಸಿದ್ದರು. ಆದರೆ ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿರಲ್ಲ. ಕೆಪಿಸಿಸಿ ಶಿಸ್ತು ಕ್ರಮಕ್ಕೆ ಆಗ್ರಹಿಸಿದ್ದರೂ, ನಂತರ ನಾಯಕರು ಬೇಡ ಎಂದು ನಿರ್ಧರಿಸಿದ್ದು, ಕೆ.ವಿ.ಥಾಮಸ್‍ಗೆ ಅನುಕೂಲವಾಗುವುದರಿಂದ ಈ ಕ್ರಮ ಸೂಕ್ತವಲ್ಲ ಎನ್ನಲಾಗಿತ್ತು.
ಇದರ ಬೆನ್ನಲ್ಲೇ ತೃಕ್ಕಾಕರ ಉಪಚುನಾವಣೆಗೆ ಸಂಬಂಧಿಸಿದಂತೆ ಸಿಪಿಎಂ ಪ್ರಚಾರ ಸಣೆಗೆ ಕೆ.ವಿ.ಥಾಮಸ್ ತೆರಳಿದ್ದು ಮತ್ತೆ ಕೆರಳುವಂತೆ ಮಾಡಿತು. ಮೊನ್ನೆಯಷ್ಟೇ ಕೆ.ವಿ.ಥಾಮಸ್ ತಮ್ಮ ಬೆಂಬಲ ಎಲ್‍ಡಿಎಫ್‍ಗೆ ಇದ್ದು, ಕಾಂಗ್ರೆಸ್‍ನಿಂದ ಎಲ್‍ಡಿಎಫ್ ಅಭ್ಯರ್ಥಿಗೆ ಮತ ಯಾಚಿಸುವುದಾಗಿ ಹೇಳಿದ್ದರು. ಇದರ ಅಂಗವಾಗಿ ನಿನ್ನೆ ಸಂಜೆ ನಡೆದ ಎಲ್ ಡಿಎಫ್ ಸಮಾವೇಶದಲ್ಲಿ ಕೆ.ವಿ.ಥಾಮಸ್ ಭಾಗವಹಿಸಿದ್ದರು.
ಎಲ್ ಡಿಎಫ್ ವೇದಿಕೆಯಲ್ಲಿ ಹಿರಿಯ ಕಾಂಗ್ರೆಸ್ ನಾಯಕರಾದ ಉಮ್ಮನ್ ಚಾಂಡಿ ಮತ್ತು ಎಕೆ ಆಂಟನಿ ಅವರನ್ನು ಕೆವಿ ಥಾಮಸ್ ಕಟುವಾಗಿ ಟೀಕಿಸಿದ್ದರು. ತೃಕ್ಕಾಕರ ಕಾಂಗ್ರೆಸ್ ಅಭ್ಯರ್ಥಿ ನಿರ್ಧಾರವನ್ನು ಟೀಕಿಸಿದರು. ಈ ಹಿನ್ನೆಲೆಯಲ್ಲಿ ತರಾತುರಿಯಲ್ಲಿ ಕಾಂಗ್ರೆಸ್ಸ್ ಕ್ರಮ ಕೈಗೊಂಡಿತು.