ಕಾಸರಗೋಡು: ಸರ್ಕಾರದ ಪ್ರಥಮ ವಾರ್ಷಿಕೋತ್ಸವ ಅಂಗವಾಗಿ ಮೈ ಎಕ್ಸಿಬಿಷನ್ ಮತ್ತು ಮಾರ್ಕೆಟಿಂಗ್ ಮೇಳದ ಉದ್ಘಾಟನೆ ಬುಧವಾರ ನಡೆಯಿತು. ಕಾರ್ಯಕ್ರಮದ ಪೂರ್ವಭಾವಿಯಾಗಿ ಕಾಞಂಗಾಡ್ ಆಕಾಶ್ ಸಭಾಂಗಣ ವಠಾರದಿಂದ ಸಾಂಸ್ಕøತಿಕ ಮೆರವಣಿಗೆ ನಡೆಯಿತು.
ಕಾಸರಗೋಡಿನ ಇತಿಹಾಸ ಮತ್ತು ಸಂಸ್ಕೃತಿ ಬಿಂಬಿಸುವ ಮೆರವಣಿಗೆಯಲ್ಲಿ ಸಾವಿರಾರು ಮಂದಿ ಪಾಲ್ಗೊಂಡಿದ್ದರು. ಮೆರವಣಿಗೆಯಲ್ಲಿ ಆಂದೋಲನ, ಸ್ತಬ್ಧಚಿತ್ರ, ಶಿಂಗಾರಿಮೇಳ, ಕುಟುಂಬಶ್ರೀ, ಹಸಿರು ಕ್ರಿಯಾಸೇನೆ, ಸ್ಟೂಡೆಂಟ್ ಪೆÇಲೀಸ್, ಯೂತ್ ಕ್ಲಬ್‍ಗಳು, ವಿವಿಧ ಇಲಾಖೆಗಳು ಮತ್ತು ಸ್ಥಳೀಯಾಡಳಿತ ಸಂಸ್ಥೆ ಪ್ರತಿನಿಧಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಜನಪ್ರತಿನಿಧಿಗಳು, ವಿವಿಧ ಇಲಾಖೆಗಳ ನೌಕರರು, ಆಶಾ ವರ್ಕರ್ಸ್, ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಕಾರ್ಯಕರ್ತರು, ಸಾಕ್ಷರತಾ ಕಾರ್ಯಕರ್ತರು, ಎನ್ನೆಸ್ಸೆಸ್ ಸ್ವಯಂ ಸೇವಕರು ಮತ್ತು ವಿವಿಧ ಸಂಘಟನೆಗಳ ಪದಾಧಿಕಾರಿಗಳು ಮೆರವಣಿಗೆಯ ಭಾಗವಾಗಿದರು. ಕಾಞಂಗಾಡು ನಗರಸಭೆ, ಅಜನೂರು ಗ್ರಾಮ ಪಂಚಾಯಿತಿ. ಕೃಷಿ ಇಲಾಖೆ, ನಾಗರಿಕ ಸರಬರಾಜು, ಮೀನುಗಾರಿಕೆ, ಆರೋಗ್ಯ, ಕೈಗಾರಿಕೆ, ಕೋಡೋಂ ಬೇಲೂರು ಗ್ರಾಮ ಪಂಚಾಯಿತಿ, ಸಾಕ್ಷರತಾ ಮಿಷನ್, ಸಾಮಾಜಿಕ ನ್ಯಾಯ, ಪ.ವರ್ಗ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಡಿಕೈ ಪಂಚಾಯತ್, ನೀಲೇಶ್ವರಂ ನಗರಸಭೆ ಪ್ರತಿನಿಧಿಗಳು ಮೆರವಣಿಗೆಯನ್ನು ಮುನ್ನಡೆಸಿದರು. ಕಾಞಂಗಾಡು ನಗರಸಭೆ ಅಧ್ಯಕ್ಷೆ ಕೆ.ವಿ.ಸುಜಾತ, ಉಪಾಧ್ಯಕ್ಷ ಬಿಲ್ ಟೆಕ್ ಅಬ್ದುಲ್ಲಾ, ಸ್ಥಾಯಿ ಸಮಿತಿ ಅಧ್ಯಕ್ಷರು ಹಾಗೂ ಕಾಞಂಗಾಡು ಬ್ಲಾಕ್ ಪಂಚಾಯಿತಿ ಉಪಾಧ್ಯಕ್ಷೆ ಕೆ.ವಿ.ಶ್ರೀಲತಾ ಮೆರವಣಿಗೆಯಲ್ಲಿ ಪಾಲ್ಗೊಂಡರು.