ಬದಿಯಡ್ಕ: ಪ್ರತಿಯೊಬ್ಬರಲ್ಲೂ ಸುಪ್ತ ಸ್ವರೂಪದಲ್ಲಿ ಕಲಾಶಕ್ತಿ ಇರುತ್ತದೆ. ಅದನ್ನು ವಿಕಾಸಗೊಳಿಸಲು ಶಿಬಿರಗಳು ಸಹಕಾರಿ. ಮಕ್ಕಳು ಶ್ರೇóಷ್ಠವಾದುದನ್ನು ಇಂತಹ ಶಿಬಿರಗಳಿಂದ ಮತ್ತು ಸಮಾಜದಿಂದ ಸ್ವೀಕರಿಸಲು ಸಿದ್ದರಾಗಬೇಕು ಎಂದು ಕಾಸರಗೋಡು ಸರ್ಕಾರಿ ಕಾಲೇಜಿನ ಸಹ ಪ್ರಾಧ್ಯಾಪಕ ಡಾ.ರಾಧಾಕೃಷ್ಣ ಎನ್. ಬೆಳ್ಳೂರು ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಎಡನೀರು ಶ್ರೀಈಶ್ವರಾನಂದ ಭಾರತೀ ಸ್ವಾಮೀಜಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಎಡನೀರು ಶ್ರೀಗಳ ಆಶೀರ್ವಾದಗಳೊಂದಿಗೆ ಎಡನೀರಿನ ಉಡುಪಮೂಲೆ ಭೂಮಿಕಾ ಪ್ರತಿಷ್ಠಾನ ಆಯೋಜಿಸಿದ್ದ ಐದು ದಿನಗಳ ಕನ್ನಡ ಸಂಸ್ಕøತಿ ಶಿಬಿರದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.
ನಿವೃತ್ತ ಐಎಎಸ್ ಅಧಿಕಾರಿ ಡಾ.ಕೆ.ಗೋಪಾಲಕೃಷ್ಣ ಭಟ್ ಎಡನೀರು ದೀಪ ಬೆಳಗಿಸಿ ಉದ್ಘಾಟಿಸಿ ಹರೆಯದಲ್ಲಿ ಲಭಿಸುವ ದೃಢ ಮಾರ್ಗದರ್ಶನಗಳು ಯಶಸ್ವೀ ಬದುಕಿಗೆ ದಾರಿಯಾಗುತ್ತದೆ ಎಂದರು.
ಪತ್ರಕರ್ತ, ಕಲಾವಿದ ವಿ.ಜಿ.ಕಾಸರಗೋಡು |ಶುಭಹಾರೈಸಿದರು. ಭೂಮಿಕಾ ಪ್ರತಿಷ್ಠಾನದ ನಿರ್ದೇಶಕಿ ವಿದುಷಿಃ ಅನುಪಮ ರಾಘವೇಂದ್ರ ಉಡುಪಮೂಲೆ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿ, ವಂದಿಸಿದರು. ಪ್ರತಿಷ್ಠಾನದ ಖಜಾಂಜಿ ರಾಘವೇಂದ್ರ ಭಟ್ ನಿರೂಪಿಸಿದರು.
ಶಿಬಿರದಲ್ಲಿ ಜಿಲ್ಲೆಯ 60 ಕ್ಕೂ ಮಿಕ್ಕಿದ ಮಕ್ಕಳು ಭಾಗವಹಿಸುತ್ತಿದ್ದಾರೆ. ಬುಧವಾರ ಮುಖವಾಡ ಹಾಗೂ ಪೇಪರ್ ಕ್ರಾಪ್ಟ್ ಕುರಿತು ಸುಳ್ಯದ ಪ್ರಸನ್ನ ಐವರ್ನಾಡು ಸಂಪನ್ಮೂಲ ವ್ಯಕ್ತಿಯಾಗಿ ಮಾರ್ಗದರ್ಶನ ನೀಡಿದರು. ಗುರುವಾರ ಡಾ.ಸ್ನೇಹಪ್ರಕಾಶ್ ಬದಿಯಡ್ಕ ಇವರಿಂದ ಸುಗಮ ಸಂಗೀತ ಮತ್ತು ಸಮೂಹ ಗಾಯನ ತರಬೇತಿ ನಡೆಯಿತು. ಇಂದು |ಶುಕ್ರವಾರ ರಂಗಕರ್ಮಿ ಉದಯ ಸಾರಂಗ್ ಅವರಿಂದ ರಂಗಚಟುವಟಿಕೆಗಳ ತರಬೇತಿ ನಡೆಯಲಿದೆ.