ಕಾಸರಗೋಡು: ಹದಿನಾಲ್ಕನೇ ಪಂಚವಾರ್ಷಿಕ ಯೋಜನೆಯಲ್ಲಿ ಸಮಗ್ರ ಮತ್ತು ಸುಸ್ಥಿರ ವಿನೂತನ ಯೋಜನೆಗಳಿಗೆ ಆದ್ಯತೆ ನೀಡಲು ಜಿಲ್ಲಾ ಪಂಚಾಯಿತಿ ವರ್ಕಿಂಗ್ ಗ್ರೂಪ್ ಸಾಮಾನ್ಯ ಸಭೆ ನಿರ್ಧರಿಸಿದೆ. ಮೊದಲ ಹಂತದಲ್ಲಿ ಶಿಕ್ಷಣ, ಆರೋಗ್ಯ ಮತ್ತು ಸೇವಾ ವಲಯ (ಅಂಗನವಾಡಿಗಳು)ಸಂಬಂಧಿಸಿದ ಯೋಜನೆಗಳನ್ನು ಪೂರ್ಣಗೊಳಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ಮಾರ್ಚ್ ತಿಂಗಳಲ್ಲೇ ನದಿ ಶುದ್ಧೀಕರಣ ಮತ್ತು ತ್ಯಾಜ್ಯ ವಿಲೇವಾರಿ ಯೋಜನೆ ಆರಂಭಿಸಲಾಗಿದೆ. 2022-23ರ ಜಂಟಿ ಯೋಜನೆಯನ್ವಯ 40 ಶಾಲೆಗಳ ಸುತ್ತು ಆವರಣಗೋಡೆ ನಿರ್ಮಿಸಿ, ಆಟದ ಮೈದಾನಗಳನ್ನು ಒದಗಿಸಳು ತೀರ್ಮಾನಿಸಲಾಯಿತು. ಜಿಪಂ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಪ್ರಧಾನ ಭಾಷಣ ಮಾಡಿ ಕೆಡಿಪಿ ಸಹಯೋಗದಲ್ಲಿ ಜಮೀನು ಹೊಂದಿರುವ 67 ಅಂಗನವಾಡಿಗಳಿಗೆ ಕಟ್ಟಡ ಸೌಕರ್ಯ ಕಲ್ಪಿಸಿ ಎಬಿಸಿ ಯೋಜನೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮಾಡಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು. ರಾಷ್ಟ್ರೀಯ ಹೆದ್ದಾರಿ ಮೇಲ್ದರ್ಜೆಗೇರಿದ ಕಾರಣ ಜಿಲ್ಲೆಯಲ್ಲಿ 8000 ಮರಗಳನ್ನು ಕಡಿಯಬೇಕಾಗಿ ಬಂದಿದ್ದು, ಇದರ ಬದಲಿಯಾಗಿ ಸಸಿ ನೆಡುವ ಯೋಜನೆ ಬಗ್ಗೆ ಚಿಂತನೆ ನಡೆಸಲಾಯಿತು.
ಈ ಸಂದರ್ಭ ಲೈಫ್ ಯೋಜನೆಯನ್ವಯ ವಿವಿಧ ಕುಟುಂಬಗಳಿಗೆ ನಿರ್ಮಿಸಿ ನೀಡಲಾದ ಮನೆಗಳ ಕೀಲಿಕೈ ಹಸ್ತಾಂತರ ನಡೆಯಿತು. ಚೆಂಗಳ ಪಂಚಾಯಿತಿಯ ಅರಳಡುಕದ ಕೆ. ಶೋಭಾ ಮತ್ತು ಭವ್ಯ ಅವರಿಗೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಅವರು ಕೀಲಿಕೈ ಹಸ್ತಾಂತರಿಸಿದರು. .ಬ್ಲಾಕ್ ಪಂಚಾಯಿತಿ ಅಧ್ಯಕ್ಷರಾದ ಮಾಧವನ್ ಮಣಿಯಾರ, ಕೆ.ಮಣಿಕಂಠನ್, ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷರಾದ ಕೆ.ಶಕುಂತಲಾ, ನ್ಯಾಯವಾದಿ ಎಸ್.ಎನ್.ಸರಿತಾ, ಜಿಪಂ ಸದಸ್ಯರಾದ ಸಿ.ಜೆ.ಸಜಿತ್, ಜಮೀಲಾ ಸಿದ್ದೀಕ್, ಜಾಸ್ಮಿನ್ ಕಬೀರ್, ಪಿ.ಬಿ.ಶಫೀಕ್, ಗೋಲ್ಡನ್ ಅಬ್ದುಲ್ ರಹಮಾನ್, ನಾರಾಯಣ ನಾಯ್ಕ್, ಕಮಲಾಕ್ಷಿ, ಶೈಲಾಜಾ ಎಂ. ಭಟ್, ಜೋಮನ್ ಜೋಸ್ ಜಿಲ್ಲಾ ಪಂಚಾಯಿತಿ ಕಾರ್ಯದರ್ಶಿ ಪ್ರದೀಪ್ ಕುಮಾರ್, ಕೇಂದ್ರೀಯ ವಿಶ್ವ ವಿದ್ಯಾಲಯ ಪ್ರಾಧ್ಯಾಪಕ ಪೆÇ್ರಫೆಸರ್ ಎಂಎಸ್ ಜಾನ್ ಉಪಸ್ಥಿತರಿದ್ದರು.