ಕೊಚ್ಚಿ: ಕೇರಳ ಪೋಲೀಸರಿಂದ ತನಗೆ ಕೆಟ್ಟ ಅನುಭವವಾಗಿದೆ ಎಂದು ನಟಿ ಅರ್ಚನಾ ಕವಿ ಬಹಿರಂಗಪಡಿಸಿದ್ದಾರೆ. ಇನ್ಸ್ಟಾಗ್ರಾಮ್ ಪೋಸ್ಟ್ ಮೂಲಕ ನಟಿ ಹೇಳಿದ ಸ್ಥಳದಲ್ಲಿ ಯಾರು ಕರ್ತವ್ಯದಲ್ಲಿದ್ದರು ಎಂದು ಪೋಲೀಸರು ತನಿಖೆ ನಡೆಸುತ್ತಿದ್ದಾರೆ.
ಮೊನ್ನೆ ರಾತ್ರಿ ಆಟೋದಲ್ಲಿ ಪ್ರಯಾಣಿಸುತ್ತಿದ್ದಾಗ ಕೇರಳ ಪೋಲೀಸರಿಂದ ತನಗೆ ಕೆಟ್ಟ ಅನುಭವವಾಗಿದೆ ಎಂದು ಅರ್ಚನಾ ಕವಿ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದರು. ಪೋಲೀಸರು ತನ್ನನ್ನು ಕೆಟ್ಟದಾಗಿ ನಡೆಸಿಕೊಂಡರು ಮತ್ತು ಸುರಕ್ಷಿತವಾಗಿರಲಿಲ್ಲ ಎಂದು ನಟಿ ಹೇಳಿದರು. ಅರ್ಚನಾ ತನ್ನ ಇನ್ಸ್ಟಾಗ್ರಾಮ್ ಬರಹವನ್ನು ಕೇರಳ ಪೋಲೀಸ್ ಮತ್ತು ಪೋರ್ಟ್ ಕೊಚ್ಚಿ ಎಂಬ ಹ್ಯಾಶ್‍ಟ್ಯಾಗ್‍ಗಳೊಂದಿಗೆ ಹಂಚಿಕೊಂಡಿದ್ದಾರೆ.
ಸ್ನೇಹಿತರು ಮತ್ತು ಕುಟುಂಬದೊಂದಿಗೆ ಪ್ರಯಾಣಿಸುತ್ತಿದ್ದಾಗ ಈ ಘಟನೆ ನಡೆದಿತ್ತು. ಕೇವಲ ಮಹಿಳೆಯರೊಂದಿಗೆ ಆಟೋದಲ್ಲಿ ತೆರಳುತ್ತಿದ್ದಾಗ ಪೋಲೀಸರು ತಡೆದು ವಿಚಾರಣೆ ನಡೆಸಿದ್ದಾರೆ.
ನಾನು ಮನೆಗೆ ಹೋಗುತ್ತಿದ್ದೇನೆ ಎಂದು ಹೇಳಿದಾಗ ಪೋಲೀಸರು ಮನೆಗೆ ಏಕೆ ಹೋಗುತ್ತಿದ್ದೀರಿ ಎಂದು ಕೇಳಿದರು ಎಂದು ನಟಿ ತಿಳಿಸಿರುವರು. ಈ ಸಮಯದಲ್ಲಿ ಪ್ರಯಾಣ ಮಾಡುವುದು ತಪ್ಪೇ ಎಂಬ ಪ್ರಶ್ನೆಯೊಂದಿಗೆ ಅರ್ಚನಾ ಪೋಸ್ಟ್ ಹಂಚಿಕೊಂಡಿದ್ದಾರೆ.