ಮುಳ್ಳೇರಿಯ: ಕುಂಡಂಕುಳಿಯಲ್ಲಿ ಮಾದಕ ವಸ್ತು ವಿರೋಧಿ ಮಿಷನ್ ಹಾಗೂ ಸ್ಟೂಡೆಂಟ್
ಪೋಲೀಸ್ ಕೆಡೆಟ್ ಯೋಜನೆಯ ಆಶ್ರಯದಲ್ಲಿ ಎಸ್ ಪಿಸಿ ಮಕ್ಕಳಿಗಾಗಿ ಮಾದಕ ವಸ್ತು ವಿರೋಧಿ ಸಂದೇಶದೊಂದಿಗೆ ಆಯೋಜಿಸಿದ್ದ ಫುಟ್ ಬಾಲ್ ಸ್ಪರ್ಧೆಯಲ್ಲಿ ಜಿಎಚ್ ಎಸ್ ಎಸ್ ಕುಂದಂಕುಳಿ ಘಟಕ ಬೇಕಲ ಉಪವಿಭಾಗದ ಪ್ರಥಮ ಸ್ಥಾನ ಪಡೆಯಿತು. ಚೆಮ್ಮನಾಡು ಸಿಜೆಎಚ್‍ಎಸ್‍ಎಸ್ ಘಟಕ ದ್ವಿತೀಯ ಸ್ಥಾನ ಗಳಿಸಿತು.
ಕುಂಡಂಕುಳಿಯಲ್ಲಿ ನಡೆದ ಪಂದ್ಯವನ್ನುಬೇಕಲ ಸಿಐಸಿ ಸುನೀಲ್ ಕುಮಾರ್ ಉದ್ಘಾಟಿಸಿದರು. ಬ್ಲಾ.ಪಂ.ಅಧ್ಯಕ್ಷ ಸುರೇಶ ಪಾಯಂ ಅಧ್ಯಕ್ಷತೆ ವಹಿಸಿದ್ದರು. ಎಸ್‍ಎಂಸಿ ಅಧ್ಯಕ್ಷ ಎಂ.ರಘುನಾಥ್, ಎಡಿಎನ್‍ಒ ಕೆ.ಶ್ರೀಧರನ್ ಮತ್ತು ಹಿರಿಯ ಸಹಾಯಕ ಪಿ.ಹಾಶಿಮ್ ಮಾತನಾಡಿದರು. ಎಸ್‍ಪಿಸಿ ಡಿಎನ್‍ಒ ಮತ್ತು ನಾರ್ಕೋಟಿಕ್ ಸೆಲ್ ಡಿವೈಎಸ್‍ಪಿ ಎಂ.ಎ ಮ್ಯಾಥ್ಯೂ ಸ್ವಾಗತಿಸಿ, ಎಸ್‍ಪಿಸಿ ಜಿಲ್ಲಾ ಸಂಯೋಜಕ ಕೆ.ಅಶೋಕನ್ ವಂದಿಸಿದರು. ಕುಂಡಂಕುಳಿ ಶಾಲಾ ಮುಖ್ಯೋಪಾಧ್ಯಾಯ ಕೆ.ಟಿ.ಕುಂಜಿಮೊಯ್ದು ಟ್ರೋಫಿ ವಿತರಿಸಿದರು.