ತಿರುವನಂತಪುರ: ಕೆ ರೈಲ್ ಅಭಿಯಾನಕ್ಕೆ ಮತ್ತೊಂದು ಕೈಪಿಡಿಯನ್ನು ಬಿಡುಗಡೆ ಮಾಡಲು ಸರ್ಕಾರ ನಿರ್ಧರಿಸಿದೆ.
ಈ ಹಿನ್ನೆಲೆಯಲ್ಲಿ ಎರಡನೇ ಬಾರಿಗೆ ಕೈಪಿಡಿ ಬಿಡುಗಡೆ ಮಾಡಲು ಸರ್ಕಾರ ನಿರ್ಧರಿಸಿದೆ. ಸರಕಾರ ಐದು ಲಕ್ಷ ಕೈಪಿಡಿಗಳನ್ನು ಮುದ್ರಿಸುತ್ತಿದೆ.ಇದಕ್ಕಾಗಿ 7 ಲಕ್ಷ ರೂ. ವ್ಯಯಿಸಲಿದೆ. ಈ ಹಿಂದೆ 4.5 ಕೋಟಿ ವೆಚ್ಚದಲ್ಲಿ 50 ಲಕ್ಷ ಕೈಪಿಡಿಗಳನ್ನು ಮುದ್ರಿಸಲಾಗಿತ್ತು.
ನಾಗರಿಕ ಗಣ್ಯರೊಂದಿಗೆ ಚರ್ಚೆಗಳು ಮತ್ತು ಸಾರ್ವಜನಿಕ ಸಭೆಗಳ ನಂತರ ಇಂತಹ ಅಭಿಯಾನಕ್ಕೆ ಸಿದ್ಧತೆಗಳನ್ನು ಮಾಡಲಾಗುತ್ತದೆ. ಯೋಜನೆಗೆ ಈ ಹಿಂದೆ ಸರ್ಕಾರ ಟೆಂಡರ್ ಕರೆದಿತ್ತು. ಜಾಗೃತಿಗಾಗಿ ಕರಪತ್ರಗಳನ್ನೂ ಸಿದ್ಧಪಡಿಸಲಾಗುವುದು ಎಂದು ತಿಳಿದುಬಂದಿದೆ.