ಮುಳ್ಳೇರಿಯ: ಮುಳಿಯಾರು ಗ್ರಾಮ ಪಂಚಾಯತಿ ವತಿಯಿಂದ ಗ್ರಂಥಾಲಯಕ್ಕೆ ಪುಸ್ತಕಗಳನ್ನು ವಿತರಿಸುವ ಮೂಲಕ ಇತ್ತೀಚೆಗೆ ಪುಸ್ತಕ ದಿನಾಚರಣೆಯನ್ನು ಆಚರಿಸಲಾಯಿತು. ಗ್ರಾ.ಪಂ.ಅಧ್ಯಕ್ಷೆ ಪಿ.ವಿ.ಮಿನಿ ಉದ್ಘಾಟಿಸಿದರು. ವಾರಕ್ಕೆ ಒಂದು ಪುಸ್ತಕದಂತೆ ಓದುವುದರಿಂದ ಜ್ಞಾನ-ಅರಿವಿನ ವಿಸ್ತಾರದ ಜೊತೆಗೆ ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದರು. ಉದ್ಘಾಟನೆ ಸಂದರ್ಭ ಓದಿನ Àರ್ಧನೆಗೆ ಪ್ರತಿಜ್ಞೆ ಬೋಧಿಸಲಾಯಿತು. ಉಪಾಧ್ಯಕ್ಷ ಕೆ.ಜನಾರ್ದನನ್ ಅಧ್ಯಕ್ಷತೆ ವಹಿಸಿದ್ದರು. ವಿ.ಸತ್ಯವತಿ, ಎ.ಶ್ಯಾಮಲಾ, ಅಬ್ಬಾಸ್ ಕೊಳಚಪ್ಪು, ಎಂ.ಅನನ್ಯ, ಸಿ. ನಾರಾಯಣಿ ಕುಟ್ಟಿ, ಪಿ.ರವೀಂದ್ರನ್, ಎಸ್.ಪ್ರಶಾಂತ್ ಕುಮಾರ್, ಪಿ.ರಾಜೀವ್, ಕೆ.ಮನೋಜ್ ಕುಮಾರ್, ಅರುಣ್ ಕುಮಾರ್ ಗ್ರಂಥಪಾಲಕ ಕಿರಣ್ ಕುಮಾರ್ ಮಾತನಾಡಿದರು.