ಎರ್ನಾಕುಳಂ: ತಿರುವನಂತಪುರಂನಲ್ಲಿ ದ್ವೇಷಪೂರಿತ ಭಾಷಣ ಮಾಡಿದ ಪ್ರಕರಣದಲ್ಲಿ ಜಾಮೀನು ರದ್ದುಗೊಳಿಸಿರುವ ಕ್ರಮದ ವಿರುದ್ಧ ಪಿಸಿ ಜಾರ್ಜ್ ಹೈಕೋರ್ಟ್‍ಗೆ ಹಾಜರಾಗಲಿದ್ದಾರೆ. ಕೆಳ ನ್ಯಾಯಾಲಯದ ತೀರ್ಪನ್ನು ರದ್ದುಗೊಳಿಸುವಂತೆ ಕೋರಿ ಪಿಸಿ ಜಾರ್ಜ್ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಅವರ ಅರ್ಜಿಯನ್ನು ನ್ಯಾಯಾಲಯ ಶುಕ್ರವಾರ(ಇಂದು) ಪರಿಗಣಿಸಲಿದೆ.
ಈ ಪ್ರಕರಣದಲ್ಲಿ ತಿರುವನಂತಪುರಂ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಪಿಸಿ ಜಾರ್ಜ್ ಜಾಮೀನನ್ನು ರದ್ದುಗೊಳಿಸಿದೆ. ಇದನ್ನು ಪ್ರಶ್ನಿಸಿ ಪಿಸಿ ಜಾರ್ಜ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿಯು ನ್ಯಾಯಮೂರ್ತಿ ಸಿಯಾದ್ ರಹಮಾನ್ ನೇತೃತ್ವದ ಏಕ ಪೀಠದ ಮುಂದಿದೆ.
ಮೊನ್ನೆ ಮಧ್ಯಾಹ್ನ ಕೋರ್ಟ್ ಆದೇಶದ ಮೂಲಕ ಪಿಸಿ ಜಾರ್ಜ್ ಜಾಮೀನು ರದ್ದುಗೊಳಿಸಲಾಗಿತ್ತು. ಬಳಿಕ ಪೋಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಕೊಚ್ಚಿ ಪೋಲೀಸರು ಜೋರ್ಜ್‍ರನ್ನು ಎರಟ್ಟುಪೆಟ್ಟಾದಿಂದ ವಶಕ್ಕೆ ತೆಗೆದುಕೊಂಡಿದ್ದಾರೆ. ನಂತರ ವೆನ್ನಾಲದಲ್ಲಿ ಮಾಡಿದ ಭಾಷಣ ಮತ್ತು ತಿರುವನಂತಪುರದಲ್ಲಿ ಮಾಡಿದ ಭಾಷಣಕ್ಕೆ ಸಂಬಂಧಿಸಿದಂತೆ ಅವರನ್ನು ಬಂಧಿಸಲಾಯಿತು. ಅಷ್ಟರಲ್ಲಿ ಅವರನ್ನು ವಶಕ್ಕೆ ತೆಗೆದುಕೊಳ್ಳಲು ತಿರುವನಂತಪುರ ಪೋಲೀಸರು ಮೊನ್ನೆ ರಾತ್ರಿಯೇ ಆಗಮಿಸಿದ್ದರು.