ವಾರಾಣಸಿ: ಜ್ಞಾನವಾಪಿ ಮಸೀದಿಯಲ್ಲಿ ಹಲವಾರು ದೇವರು, ದೇವತೆಗಳ ಶಿಲ್ಪಗಳು ಸೇರಿದಂತೆ ಹಿಂದೂ ನಂಬಿಕೆಗಳಿಗೆ ಸಂಬಂಧಿಸಿದ ಶೇಷನಾಗ ಮತ್ತಿತರ ಶಿಲ್ಪಕಲೆಗಳು ಕಂಡುಬಂದಿವೆ ಎಂದು ಜ್ಞಾನವಾಪಿ-ಗೌರಿ ಶಂಗಾರ್ ಸಂಕೀರ್ಣ ಸಮೀಕ್ಷೆ ಮಾಡಲು ವಾರಾಣಸಿ ನ್ಯಾಯಾಲಯದಿಂದ ನೇಮಕ ಮಾಡಿದ್ದ ವಕೀಲ ಅಜಯ್ ಕುಮಾರ್ ಮಿಶ್ರಾ ಹೇಳಿದ್ದಾರೆ. ಆದರೆ, ಮಾಹಿತಿ ಸೋರಿಕೆಗಾಗಿ ನಂತರ ಅವರನ್ನು ತೆಗೆದುಹಾಕಲಾಗಿದೆ.
ವಿವಾದಿತ ಪ್ರದೇಶದ ಬ್ಯಾರಿಕೇಡಿಂಗ್‌ನ ಹೊರಗೆ ಹಳೆಯ ದೇವಾಲಯದ ಅವಶೇಷಗಳು ಕಂಡುಬಂದಿವೆ, ಅದರಲ್ಲಿ ದೇವರು ಮತ್ತು ದೇವತೆಗಳ ಶಿಲ್ಪಗಳು ಮತ್ತು ಕಮಲದ ಮಾದರಿಗಳು ಕಂಡುಬಂದಿವೆ. ಮಧ್ಯದಲ್ಲಿ, ಶೇಷನಾಗ್ ಮತ್ತು ನಾಗ್ ಫಾನ್‌ನ ಕಲ್ಲಿನ ಶಿಲ್ಪಕಲೆ ಮಾದರಿಗಳು ಕಂಡುಬಂದಿರುವುದಾಗಿ ಮಿಶ್ರಾ ವರದಿಯಲ್ಲಿ ಹೇಳಲಾಗಿದೆ.
ಸಿಂದೂರಿ ಗುರುತು ಇರುವ ನಾಲ್ಕು ವಿಗ್ರಹಗಳಂತಹ ರಚನೆಗಳನ್ನು ಗಮನಿಸಲಾಯಿತು. ದೀಪಗಳನ್ನು ಬೆಳಗಿಸುವ ವ್ಯವಸ್ಥೆಗಳು ಇದ್ದವು ಎಂದು ತೋರುತ್ತದೆ. ಮಸೀದಿಯ ಹಿಂಭಾಗದ ಪಶ್ಚಿಮ ಗೋಡೆಯಲ್ಲಿ ಕಲಾತ್ಮಕ ಮಾದರಿಯ ಕಲ್ಲಿನ ಚಪ್ಪಡಿಗಳನ್ನು ಇರಿಸಲಾಗಿದೆ ಎಂದು ವರದಿ ಹೇಳಿದೆ. ಮಿಶ್ರಾ ಅವರ ವರದಿಯಲ್ಲಿ ಸಿಂಧೂರ್ ಗುರುತುಗಳನ್ನು ಹೊಂದಿರುವ ಮೂರು-ನಾಲ್ಕು ಶಿಲ್ಪಗಳು ಮತ್ತು 'ಚೌಖತ್ ನಂತಹ ಕಲ್ಲಿನ ಚಪ್ಪಡಿಯನ್ನು 'ಶೃಂಗಾರ ಗೌರಿ' ಎಂದು ನಂಬಲಾಗಿದೆ.
ಅಡ್ವೊಕೇಟ್ ಕಮಿಷನರ್ ಅಜಯ್ ಮಿಶ್ರಾ ಕೆಲಸ ನಿರ್ವಹಿಸುವಲ್ಲಿ ಅತ್ಯಂತ ಬೇಜವಾಬ್ದಾರಿ ಹೊಂದಿದ್ದಾರೆ ಎಂದು ಹೇಳಿ ಸ್ಥಳೀಯ ನ್ಯಾಯಾಲಯ ಮಂಗಳವಾರ ಅವರನ್ನು ವಜಾಗೊಳಿಸಿತ್ತು.