ಮಂಜೇಶ್ವರ: ಪುರೋಗಮನ ಕಲಾ ಸಾಹಿತ್ಯ ಸಂಘ ಕಾಸರಗೋಡು ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಮಂಜೇಶ್ವರ-ಕುಂಬಳೆ ಏರಿಯಾ ಸಮಿತಿಯ ರಚನಾ ಸಮಾವೇಶ ಹೊಸಂಗಡಿಯಲ್ಲಿ ಭಾನುವಾರ ನಡೆಯಿತು.
ಹೊಸಂಗಡಿಯ ಕೆಎಸ್ ಟಿಎ ಭವನದಲ್ಲಿ ನಡೆದ ಸಮಾವೇಶವನ್ನು ಪುರೋಗಮನ ಕಲಾ ಸಾಹಿತ್ಯ ಸಂಘದ ರಾಜ್ಯ ಉಪಾಧ್ಯಕ್ಷ ಇ.ಪಿ.ರಾಜಗೋಪಾಲನ್ ಉದ್ಘಾಟಿಸಿದರು. ಮಂಜೇಶ್ವರ ಗ್ರಾಮ ಪಂಚಾಯತಿ ಅಧ್ಯಕ್ಷೆ ಜೀನ್ ಲವಿನಾ ಮೊಂತೇರೊ ಮುಖ್ಯ ಭಾಷಣ ಮಾಡಿದರು. ಈ ಸಂದರ್ಭದಲ್ಲಿ ವರ್ಕಾಡಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಭಾರತಿ ಸುಳ್ಯಮೆ, ನ್ಯಾಯವಾದಿ ಪಿ.ಅಪ್ಪುಕುಟ್ಟನ್, ವಾಸುದೇವ ಉಚ್ಚಿಲ, ಎಂ.ಶಂಕರ್ ರೈ, ಉಮೇಶ್ ಸಾಲಿಯಾನ್, ಸೀತಾದೇವಿ ಕಾರ್ಯಾತ್, ಬಾಲಕೃಷ್ಣ ಶೆಟ್ಟಿಗಾರ್, ಬಶೀರ್ ಕೊಟ್ಟುಡಲ್, ಡಿ. ಕಮಲಾಕ್ಷ, ಸಜಿತಾ ರೈ ಮಾತನಾಡಿದರು. ಜಿಲ್ಲಾ ಕಾರ್ಯದರ್ಶಿ ಜಯಚಂದ್ರ ಕುಟ್ಟಮತ್ ಸ್ವಾಗತಿಸಿ, ಬಾಲಕೃಷ್ಣನ್ ಚೆರ್ಕಳ ವಂದಿಸಿದರು. ಮಂಜೇಶ್ವರ ಏರಿಯಾ ಸಮಿತಿ ಗಂಗಾಧರನ್ ಪಿ(ಅಧ್ಯಕ್ಷರು) ಬಾಲಕೃಷ್ಣ ಶೆಟ್ಟಿಗಾರ್ (ಕಾರ್ಯದರ್ಶಿ) ಕುಂಬಳೆ ವಲಯ ಸಮಿತಿಯ ವಕೀಲ ಜಿ ಚಂದ್ರಮೋಹನನ್ (ಅಧ್ಯಕ್ಷರು) ಬಶೀರ್ ಕೊಟ್ಟುಡಲ್ (ಕಾರ್ಯದರ್ಶಿ) ಅವರನ್ನು ಆಯ್ಕೆಮಾಡಲಾಯಿತು.