ಕಾಸರಗೋಡು: ಕೇರಳದ ಉತ್ತರದ ಜಿಲ್ಲೆಗಳ ವಿದ್ಯುತ್ ಕ್ಷಾಮ ಪರಿಹರಿಸುವ ಹಾಗೂ ಹೆಚ್ಚುತ್ತಿರುವ ವಿದ್ಯುತ್ತಿನ ಬೇಡಿಕೆ ಈಡೇರಿಸುವ ನಿಟ್ಟಿನಲ್ಲಿ ಅಂತಾರಾಜ್ಯ ವಿದ್ಯುನ್ಮಾನ ಪ್ರಸಾರ ಶೃಂಖಲೆಯೊಂದಿಗೆ ಸಂಪರ್ಕಿಸುವ ಮೂಲಕ 400 ಕೆ ವಿ ಕಾಸರಗೋಡು-ವಯನಾಡ್ ಹಸಿರು ಪವರ್ ಹೈವೇ ಯೋಜನೆಯನ್ನು ಕಾರ್ಯಗತಗೊಳಿಸುತ್ತಿದೆ.
ಜತೆಗೆ ಜಿಲ್ಲೆಯ ಪುನರುತ್ಪಾದನಾ ಯೂಜನಾ(ಸೋಲಾರ್)ಕೇಂದ್ರಗಳಿಂದ ಉತ್ಪಾದಿಸುವ ವಿದ್ಯುತ್ ಪ್ರಸರಣದಲ್ಲಿ ಉಂಟಾಗುವ ನಷ್ಟವನ್ನು ತಗ್ಗಿಸಿ, ಯಥಾಸಮಯ ಲೋಡ್ ಸೆಟ್ಟಿಂಗ್ ಕೇಂದ್ರಕ್ಕೆ ತಲುಪಿಸುವ ನಿಟ್ಟಿನಲ್ಲಿ ಉತ್ತರ ಹಸಿರು ಕಾರಿಡಾರ್ ಜಾರಿಗೊಳಿಸಲಾಗುತ್ತಿದೆ. ಕರಿಂದಳಂ 400 ಕೆವಿ ಸಬ್‍ಸ್ಟೇಶನ್‍ನಿಂದ ಮಾನಂದವಾಡಿ ಪಯ್ಯಂಪಳ್ಳಿಗೆ ವಿದ್ಯುತ್ ಲೈನ್ ಅಳವಡಿಸಲಾಗುತ್ತಿದೆ. ಡಬಲ್ ಸಕ್ರ್ಯೂಟ್ ಲೈನ್ ಎಂಬ ಹೆಸರಿನಲ್ಲಿ ಈ ಯೋಜನೆಯನ್ನು ಕಾರ್ಯಗತಗೊಳಿಸುವುದು.
125 ಕಿಲೋಮೀಟರ್ ದೂರವಿರುವ ಪಯ್ಯಂಪಳ್ಳಿಗೆ ವಿದ್ಯುತ್ ಲೈನ್ ಅಳವಡಿಸಲು 400 ಕೆವಿ ಪ್ರಸಾರ ಸಾಮಥ್ರ್ಯವುಳ್ಳ 380 ಟವರ್‍ಗಳನ್ನು ಅಳವಡಿಸಲಾಗುಉತ್ತಿದೆ. ವಯನಾಡಿನಲ್ಲಿ 200 ಎಂ ವಿ ಎ ಸಾಮಥ್ರ್ಯವಿರುವ ಟ್ರಾನ್ಸ್‍ಫಾರ್ಮರ್ ಅಳವಡಿಸಲಾಗಿದೆ. ಅಲ್ಲಿ 180 ಮೆಗಾವಾಟ್ ವಿದ್ಯುತ್ ಬಳಸಲು ಸಾಧ್ಯವಾಘಲಿದೆ. ಕರಿಂತಳದಿಂದ ಆರಂಭಗೊಳ್ಳುವ ಯೋಜನೆ ಆಲಕೋಟ್, ಶ್ರೀಕಂಠಾಪುರಂ. ಇರಿಟ್ಟಿ, ನೆಟ್ಟಂಪೆÇಯಿಲ್ ಮಾರ್ಗವಾಗಿ ವಯ್ಯಾನಡಿಯ ಪಯ್ಯಂಪಳ್ಳಿಗೆ ವಿದ್ಯುತ್ ಮಾರ್ಗ ಅಳವಡಿಸಲಾಗುತ್ತಿದೆ. ಒಟ್ಟು 436 ಕೋಟಿ ರೂ. ಮೊತ್ತದ ಯೋಜನೆ ಇದಗಿದ್ದು, ಕೆಎಸ್‍ಇಬಿಯ ಸ್ವಂತ ಫಂಡ್‍ನಿಂದ ಹಣಬಳಸಿ ವಿದ್ಯುತ್ ಲೈನ್ ನಿರ್ಮಿಸಲಾಗುತ್ತಿದೆ. 36 ತಿಂಗಳೊಳಗೆ ವಿದ್ಯುತ್ ಮಾರ್ಗದ ನಿರ್ಮಾಣ ಕಾರ್ಯ ಪೂರ್ತಿಗೊಳಿಸಲು ಕೆಎಸ್‍ಇಬಿ ಉದ್ದೇಶಿಸಿದೆ. ಎಲ್ ಅಂಡ್ ಟಿ ಕನ್‍ಸ್ಟ್ರಕ್ಷನ್ ಸಂಸ್ಥೆ ನಿರ್ಮಾಣಕಾರ್ಯದ ಹೊಣೆ ಹೊತ್ತಿದೆ.