ಕೋಝಿಕ್ಕೋಡ್: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಇಂದು ಕೇರಳಕ್ಕೆ ಆಗಮಿಸಲಿದ್ದಾರೆ. ಬೆಳಗ್ಗೆ 9 ಗಂಟೆಗೆ ಕರಿಪ್ಪೂರ್ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿರುವ ಅವರನ್ನು ಬಿಜೆಪಿ ಮಲಪ್ಪುರಂ ಜಿಲ್ಲಾ ಸಮಿತಿ ಬರಮಾಡಿಕೊಳ್ಳಲಿದೆ.
ಸಾವಿರಾರು ಬಿಜೆಪಿ ಕಾರ್ಯಕರ್ತರು ವಾದ್ಯಮೇಳ ಮತ್ತು ಜಾನಪದ ಕಲಾ ಪ್ರಕಾರಗಳೊಂದಿಗೆ ಅವರನ್ನು ಬರಮಾಡಿಕೊಳ್ಳಲಿದ್ದಾರೆ. ಕೇರಳದ ಉಡುಗೆ ತೊಟ್ಟ ಮಹಿಳಾ ಮೋರ್ಚಾ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ.
ಕರಿಪ್ಪೂರ್ ನಲ್ಲಿ ಸ್ವಾಗತ ಸಮಾರಂಭದ ಬಳಿಕ ನೂರಾರು ವಾಹನಗಳೊಂದಿಗೆ ಕೋಝಿಕ್ಕೋಡ್ ನಗರ ಪ್ರವೇಶಿಸಲಿದ್ದಾರೆ. ಬಿಜೆಪಿ ಜಿಲ್ಲಾಧ್ಯಕ್ಷ ರವಿ ತೇಲತ್ತು ಮಾತನಾಡಿ, ಸ್ವಾಗತಕ್ಕೆ ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ ಎಂದು ತಿಳಿಸಿದ್ದಾರೆ.