ಪೆರ್ಲ: ಸರ್ಕಾರ ಹಾಗೂ ಪಂಚಾಯತಿನಿಂದ ಸಿಗುವ ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳ ಮನೆ ಬಾಗಿಲಿಗೆ ತಲುಪಿಸುವ "ವಾದಿಲ್ ಪಡಿ" ಸೇವಾ ಯೋಜನೆಗೆ ಎಣ್ಮಕಜೆ ಗ್ರಾ.ಪಂ.ನಲ್ಲಿ ಚಾಲನೆ ನೀಡಲಾಗಿದೆ. ಪಂಚಾಯತು ಮಟ್ಟದ ಉದ್ಘಾಟನೆಯನ್ನು ಎಣ್ಮಕಜೆ ಗ್ರಾ.ಪಂ.ಅಧ್ಯಕ್ಷ ಸೋಮಶೇಖರ್ ಜೆ.ಎಸ್.ಅವರು ನಿರ್ವಹಿಸಿದರು. ಗ್ರಾ.ಪಂ.ನ 9ನೇ ವಾರ್ಡಿನ ಇಂದಿರಾವತಿ ಅವರ ಮನೆಗೆ ಬೇಟಿ ನೀಡಿ ಅವರಿಗೆ ಲಭ್ಯ ಸವಲತ್ತು ಬಗ್ಗೆ ಮಾಹಿತಿ ನೀಡಲಾಯಿತು. ಅವರ ಸಮಸ್ಯೆಗಳನ್ನು ಗ್ರಾ.ಪಂ.ಅಧ್ಯಕ್ಷರು ಆಲಿಸಿದರು.
ಉಪಾಧ್ಯಕ್ಷೆ ಡಾ.ಫಾತಿಮತ್ ಝಹನಾಸ್ ಹಂಸಾರ್,ವಾರ್ಡ್ ಸದಸ್ಯೆ ರಮ್ಲಾ ಇಬ್ರಾಹಿಂ, ಗ್ರಾ.ಪಂ.ಹೆಡ್ ಕ್ಲಾರ್ಕ್ ಪ್ರೇಮನ್, ವಿಇಒ ಸನೂಪ್, ಮಾಜಿ ಉಪಾಧ್ಯಕ್ಷೆ ಆಯಿಷಾ ಎ.ಎ.,ಸಾಮಾಜಿಕ ಕಾರ್ಯಕರ್ತ ಹನ್ಸಾರ್ ಮೊದಲಾದವರು ಪಾಲ್ಗೊಂಡಿದ್ದರು. ವಾದಿಲ್ ಪಡಿ ಸೇವಾ ಯೋಜನೆಗೆ ಈಗಾಗಲೇ ಪಂಚಾಯತು ಮಟ್ಟದಲ್ಲಿ ಸಮಿತಿ ರಚಿಸಲಾಗಿದೆ. ವಾರ್ಡ್ ಮಟ್ಟದ ಸಮಿತಿಯ ಮೂಲಕ ಅರ್ಹ ಫಲಾನುಭವಿಗಳನ್ನು ಗುರುತಿಸಲಾಗುತ್ತಿದ್ದು ಕಾರ್ಯ ಯೋಜನೆಯ ಯಶಸ್ವಿಗೊಳಿಸಲಾಗುವುದೆಂದು ಪಂಚಾಯತು ಅಧ್ಯಕ್ಷ ಸೋಮಶೇಖರ್ ಜೆ.ಎಸ್.ತಿಳಿಸಿದ್ದಾರೆ.