ಕುಂಬಳೆ: ಮುಜುಂಗಾವಿನ ಶ್ರೀ ಭಾರತೀವಿದ್ಯಾಪೀಠದ ಈ ಬಾರಿಯ ಎಸ್.ಎಸ್.ಎಲ್.ಸಿ(ಹತ್ತನೆ)ಯವರ ಸ್ಪಂದನ (ಬೀಳ್ಕೊಡುಗೆ)ಕಾರ್ಯಕ್ರಮವು ಶಾಲೆಯ ಸಭಾಂಗಣದಲ್ಲಿ ವಿದ್ಯಾರ್ಥಿಗಳ ವಿವಿಧ ಚಟುವಟಿಕೆಯಿಂದ ನೆರವೇರಿತು.
ಸಭಾಕಾರ್ಯಕ್ರಮದಲ್ಲಿ ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ಎಸ್.ಎನ್ ರಾವ್ ಮುನ್ನಿಪ್ಪಾಡಿ ಸಮಯಕ್ಕೆ ಆಧ್ಯತೆ ನೀಡಬೇಕಾದ ಕಿವಿಮಾತು ಹೇಳಿದರು. ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಪುರುಷೋತ್ತಮಾಚಾರ್ಯ ಅವರು, ಸಂಸ್ಕಾರವಂತರಾಗಬೇಕು, ಎಂಬ ಸಲಹೆಯೊಂದಿಗೆ ಕತೆ ಸಹಿತ ಒಳ್ಳೆಯ ಶುಭಾಶಯಗಳನ್ನು ನೀಡಿದÀರು. ಆಡಳಿತ ಮಂಡಳಿಯ ಕಾರ್ಯದರ್ಶಿ ಶ್ಯಾಮರಾಜ್ ದೊಡ್ಡಮಾಣಿ. ಹಾಗೂ ಆಡಳಿತ ಮಂಡಳಿಯ ಸದಸ್ಯ ಸುಕುಮಾರ ಬೆಟ್ಟಂಪಾಡಿ ಮಕ್ಕಳಿಗೆ ಹಿತವಚನ ಸಲಹೆಯಿತ್ತರು.
ಶಾಲಾಮುಖ್ಯೋಪಾಧ್ಯಾಯ ಶ್ಯಾಂಭಟ್ ದರ್ಭೆಮಾರ್ಗ ಮಾತನಾಡಿ ವಿದ್ಯಾಲಯಕ್ಕೆ ವಿದ್ಯಾರ್ಥಿಗಳು ಸ್ಪಂಧಿಸಬೇಕು ಎಂಬ ವಿವರಣೆಯೊಂದಿಗೆ ಸ್ಪಂದನದ ಮೂಲೋದ್ದೇಶ ತಿಳಿಸಿದರು. ಅಧ್ಯಾಪಿಕೆ ಚಿತ್ರಾ ಸರಸ್ವತಿ ಮಕ್ಕಳ ಸ್ಥಾನವನ್ನು ಮೇಲಕ್ಕೇರಿಸುವ ಅರ್ಥ ವಿವರಣೆ ನೀಡಿ ಸ್ಪಂದನದ ಮೂಲೋದ್ದೇಶ,ಮಕ್ಕಳು ಮುಂದೆಯೂ ಶಾಲೆಯ ಬಗ್ಗೆ ವಹಿಸಬೇಕಾದ ಕಾಳಜಿ ತಿಳಿಸಿದರು. ಗ್ರಂಥಪಾಲಿಕೆ ವಿಜಯಾಸುಬ್ರಹ್ಮಣ್ಯ ಮಾತನಾಡಿದರು.
ಶಿಕ್ಷಕಿಯರಾದ ಪ್ರತೀಕ್ಷಾ ಹಾಗೂ ಉಮಾ ಟೀಚರ್ ಶುಭಾಶಂಸನೆಗೈದರು. ಹತ್ತನೇ ತರಗತಿ ವಿದ್ಯಾರ್ಥಿಗಳು ಗೋಡೆಗಡಿಯಾರ ಹಾಗೂ ಧ್ವನಿವರ್ಧಕದ ಕೊಡುಗೆ ಸಮರ್ಪಿಸಿದರು. ಸಮೂಹ ಗಾಯನ, ನೃತ್ಯ, ಯಕ್ಷಗಾನಗಳು ನಡೆದವು. ವರ್ಷಾ ವಂದಿಸಿದರು.