ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಇಬ್ಬರು ಆತ್ಮಹತ್ಯಾ ದಾಳಿಕೋರರು ಬಳಕೆ ಮಾಡುತ್ತಿದ್ದ ಟನಲ್ ಜಮ್ಮು-ಕಾಶ್ಮೀರದ ಸಾಂಬಾದಲ್ಲಿ ಪತ್ತೆಯಾಗಿದೆ.
ಪಾಕ್ ಮೂಲದ ಉಗ್ರ ಸಂಘಟನೆಯಾದ ಜೆಇಎಂ ನ ಇಬ್ಬರು ಉಗ್ರರು ಭಾರತದೊಳಗೆ ಪ್ರವೇಶಿಸುವುದಕ್ಕೆ ಈ ಟನಲ್ ನ್ನು ಬಳಕೆ ಮಾಡುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗುಂಡಿನ ಚಕಮಕಿಯಲ್ಲಿ ಏ.22 ರಂದು ಭದ್ರತಾ ಪಡೆಗಳು ಇಬ್ಬರು ಜೆಇಎಂ ಸಂಘಟನೆಯ ಉಗ್ರರನ್ನು ಹೊಡೆದು ಉರುಳಿಸಿದ ಬಳಿಕ ಈ ಗಡಿಯಾಚೆಗಿನ ಸಂಪರ್ಕ ಕಲ್ಪಿಸುವ ಟನಲ್ ಗಳು ಪತ್ತೆಯಾಗಿವೆ.
ಕಳೇದ 16 ತಿಂಗಳಿನಿಂದ ಇದೇ ಮೊದಲ ಬಾರಿಗೆ ಇಂತಹ ಟನಲ್ ನ್ನು ಬಿಎಸ್ಎಫ್ ಪತ್ತೆ ಮಾಡಿದೆ. ಈ ಮೂಲಕ ಕಳೆದ ಒಂದು ದಶಕದಲ್ಲಿ ಈ ರೀತಿ ಪತ್ತೆಯಾಗಿರುವ ಟನಲ್ ಗಳ ಸಂಖ್ಯೆ 11ಕ್ಕೆ ಏರಿಕೆಯಾಗಿದೆ.
ಕಳೆದ ವರ್ಷ ಜನವರಿಯಲ್ಲಿ ಭದ್ರತಾ ಪಡೆಗಳ ಸಿಬ್ಬಂದಿಗಳು ಇಂತಹ ಎರಡು ಟನಲ್ ಗಳನ್ನು ಕತುವಾ ಜಿಲ್ಲೆಯ ಹರಿನಗರ್ ಸೆಕ್ಟರ್ ನಲ್ಲಿ ಪತ್ತೆ ಮಾಡಿದ್ದರು.