ನವದೆಹಲಿ: ಕಾಂಗ್ರೆಸ್ ಪಕ್ಷ ಪ್ರಾದೇಶಿಕ ಪಕ್ಷಗಳನ್ನು ಗೌರವಿಸುತ್ತದೆ. ಅವುಗಳೊಂದಿಗೆ ಗುಂಪು ಪ್ರಯತ್ನದೊಂದಿಗೆ ಬಿಜೆಪಿ ವಿರುದ್ಧ ಹೋರಾಟ ನಡೆಸಲಾಗುವುದು ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹೇಳಿದ್ದಾರೆ.
ಲಂಡನ್ ನಲ್ಲಿ '' ಭಾರತಕ್ಕಾಗಿ ಐಡಿಯಾಗಳು' ಕಾನ್ಫರೆನ್ಸ್ ನಲ್ಲಿ ಸಂವಾದದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಜನರ ಧ್ವನಿಯನ್ನು ಅಡಗಿಸಲಾಗುತ್ತಿದೆ ಎಂದು ಆರೋಪಿಸಿದ ರಾಹುಲ್ ಗಾಂಧಿ, ಬೃಹತ್ ಸಮುದಾಯದ ಬೆಂಬಲದೊಂದಿಗೆ ಹೋರಾಡುವುದರೊಂದಿಗೆ ಭಾರತದ ಐಡಿಯಾವನ್ನು ರಕ್ಷಿಸಲಾಗುವುದು ಎಂದು ತಿಳಿಸಿದರು.
ಪ್ರಾದೇಶಿಕ ಪಕ್ಷಗಳ ಸಮನ್ವಯದೊಂದಿಗೆ ಆಡಳಿತರೂಢ ಸರ್ಕಾರದ ವಿರುದ್ಧ ದೇಶಾದ್ಯಂತ ಹೋರಾಟ ನಡೆಸಲಾಗುವುದು, ವಿಪಕ್ಷಗಳೊಂದಿಗೆ ನಾವು ಸಮನ್ವಯತೆ ಹೊಂದುತ್ತೇವೆ, 'ಕಾಂಗ್ರೆಸ್ ಬಿಗ್ ಡ್ಯಾಡಿ' ಎನ್ನುವ ದೃಷ್ಟಿಕೋನ ನಾನು ಹೊಂದಿಲ್ಲ. ಇದು ಪ್ರತಿಪಕ್ಷಗಳೊಂದಿಗೆ ಸಾಮೂಹಿಕ ಪ್ರಯತ್ನವಾಗಿದೆ. ಆದರೆ, ಇದು ಭಾರತವನ್ನು ಪಡೆಯಲು ಹೋರಾಟವಾಗಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದ ವಿಡಿಯೋವೊಂದನ್ನು ಶನಿವಾರ ಕಾಂಗ್ರೆಸ್ ಬಿಡುಗಡೆ ಮಾಡಿದ್ದು, ಉದಯಪುರ ಶಿಬಿರದಲ್ಲಿ ಹೇಳಲಾದ ಅಭಿಪ್ರಾಯಗಳನ್ನು ತಪ್ಪಾಗಿ ಅರ್ಥೈಹಿಸಲಾಗಿದೆ. ಇದೀಗ ಸೈದ್ದಾಂತಿಕ ಹೋರಾಟವಾಗಿದೆ. ರಾಷ್ಟ್ರೀಯ ಸೈದಾಂತಿಕ ಹೋರಾಟದಲ್ಲಿ ತಮಿಳು ರಾಜಕೀಯ ಪಕ್ಷವಾಗಿ ಡಿಎಂಕೆಯನ್ನು ನಾವು ಗೌರವಿಸುತ್ತೇವೆ. ಆದರೆ, ಕಾಂಗ್ರೆಸ್ ರಾಷ್ಟ್ರೀಯ ಪಕ್ಷವಾಗಿ ರಾಷ್ಟ್ರ ಮಟ್ಟದಲ್ಲಿ ತನ್ನದೇ ಆದ ಸಿದ್ಧಾಂತವನ್ನು ಹೊಂದಿದೆ ಎಂದು ರಾಹುಲ್ ಗಾಂಧಿ ಹೇಳಿದರು.