ಮಲಪ್ಪುರಂ: ಸಿಲ್ವರ್ ಲೈನ್ ಯೋಜನೆಗೆ ಪರ್ಯಾಯ ಪ್ರಸ್ತಾವನೆಯೊಂದಿಗೆ ಮೆಟ್ರೋಮ್ಯಾನ್ ಇ ಶ್ರೀಧರನ್ ಮುಂದೆಬಂದಿದ್ದಾರೆ. ಈ ಯೋಜನೆಯು ಪ್ರಸ್ತುತ ರೈಲು ಮಾರ್ಗದ ಅಭಿವೃದ್ಧಿಯೊಂದಿಗೆ ವೇಗದ ಪ್ರಯಾಣವನ್ನು ಸಾಧ್ಯವಾಗಿಸುತ್ತದೆ ಎಂದು ಶ್ರೀಧರನ್ ಹೇಳಿರುವರು. ಜನರಿಂದ ಪ್ರತಿಕ್ರಿಯೆ ಸಂಗ್ರಹಿಸಿದ ನಂತರ ಯೋಜನೆಯನ್ನು ಕೇಂದ್ರಕ್ಕೆ ಸಲ್ಲಿಸಲಾಗುವುದು. ಪೆÇನ್ನಾನಿಯಲ್ಲಿ ಕೇಂದ್ರ ಸಚಿವ ವಿ ಮುರಳೀಧರನ್ ಅವರನ್ನು ಭೇಟಿ ಮಾಡಿದ ನಂತರ ಇ.ಶ್ರೀಧರನ್ ತಿಳಿಸಿರುವರು.
ಸಿಲ್ವರ್ ಲೈನ್ ಆಲ್ಟರ್ನೇಟಿವ್ ಸಿಸ್ಟಮ್ ಪ್ರಾಜೆಕ್ಟ್‍ಗಾಗಿ ಎರಡು ರೀತಿಯ ವಿವರವಾದ ವರದಿಗಳಿವೆ. ಪ್ರಸ್ತುತ ರೈಲುಗಳ ವೇಗವನ್ನು ಹೆಚ್ಚಿಸುವುದು ಸೇರಿದಂತೆ ಅಲ್ಪಾವಧಿ ಮತ್ತು ದೀರ್ಘಾವಧಿಯ ಯೋಜನೆಗಳು ಚರ್ಚೆಯಲ್ಲಿವೆ. ಇ.ಶ್ರೀಧರನ್ ಮಾತನಾಡಿ, ಕಡಿಮೆ ವೆಚ್ಚದಲ್ಲಿ ತಕ್ಷಣವೇ ಕಾರ್ಯಗತಗೊಳಿಸಬಹುದಾದ ಯೋಜನೆಗಳು ಪರಿಗಣನೆಯಲ್ಲಿವೆ ಎಂದಿರುವರು.
ರಸ್ತೆ ದಟ್ಟಣೆಯನ್ನು ಕಡಿಮೆ ಮಾಡಲು ಅಲ್ಪಾವಧಿಯ ಯೋಜನೆಯನ್ನು ಜಾರಿಗೊಳಿಸುವುದು ಮೊದಲ ಹಂತವಾಗಿದೆ. ಯಾವುದೇ ಯೋಜನೆ ಬರಲು ಸಮಯ ಹಿಡಿಯುತ್ತದೆ. ಸಿಲ್ವರ್ ಲೈನ್ ಯೋಜನೆಯನ್ನು ಕಾರ್ಯಗತಗೊಳಿಸಲು ಐದು ವರ್ಷಗಳು ಸಾಕಾಗುವುದಿಲ್ಲ ಮತ್ತು ಕನಿಷ್ಠ 12 ವರ್ಷಗಳು ಬೇಕಾಗುತ್ತದೆ ಎಂದು ಇ ಶ್ರೀಧರನ್ ಹೇಳಿದರು. ಸಿಲ್ವರ್ ಲೈನ್ ಯೋಜನೆಯಿಂದ ಕೇರಳದ ಪರಿಸರದ ಮೇಲೆ ಭಾರಿ ಪರಿಣಾಮ ಬೀರಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಒಕ್ಕಲೆಬ್ಬಿಸಬೇಕಾಗುತ್ತದೆ ಎಂದು ವಿ ಮುರಳೀಧರನ್ ಈ ಹಿಂದೆಯೇ ಹೇಳಿದ್ದರು.