ಪ್ಯಾರಿಸ್: ತೀವ್ರ ಶಾಖದ ಅಲೆಯಿಂದ ಗೋಧಿ ಉತ್ಪನ್ನದ ಮೇಲೆ ಪರಿಣಾಮ ಹಾಗೂ ಜಾಗತಿಕ ಮಟ್ಟದಲ್ಲಿ ಬೆಲೆ ಏರಿಕೆಯಿಂದ ಗೋಧಿ ರಫ್ತು ನಿಷೇಧಿಸಲು ಭಾರತ ನಿರ್ಧರಿಸಿದ ನಂತರ ಜಾಗತಿಕ ಮಾರುಕಟ್ಟೆಯಲ್ಲಿ ಸೋಮವಾರ ಗೋಧಿ ಬೆಲೆ ದಾಖಲೆಯ ಮಟ್ಟಕ್ಕೆ ಏರಿದೆ.
ಯುರೋಪ್ ಮಾರುಕಟ್ಟೆ ಸೋಮವಾರ ಬೆಳಗ್ಗೆ ವಹಿವಾಟು ಆರಂಭವಾಗುತ್ತಿದ್ದಂತೆ ಗೋಧಿ ಬೆಲೆ ಪ್ರತಿ ಟನ್‌ಗೆ 435 ಯುರೋಗಳಿಗೆ ($453) ಜಿಗಿಯಿತು.
ಹಿಂದೆ ಜಾಗತಿಕ ರಫ್ತಿನ ಶೇಕಡ 12 ರಷ್ಟನ್ನು ಹೊಂದಿದ್ದ ಕೃಷಿ ಶಕ್ತಿ ಕೇಂದ್ರವಾದ ಉಕ್ರೇನ್‌ನ ಮೇಲೆ ರಷ್ಯಾ ಆಕ್ರಮಣದ ನಂತರ ಜಾಗತಿಕವಾಗಿ ಗೋಧಿ ಬೆಲೆ ಗಗನಕ್ಕೇರಿದೆ.
ಗೊಬ್ಬರದ ಕೊರತೆ, ಕಳಪೆ ಫಸಲು ಮತ್ತು ಜಾಗತಿಕವಾಗಿ ಹಣದುಬ್ಬರದಿಂದ ಬೆಲೆ ಹೆಚ್ಚಾಗಿದೆ. ಇದು ಬಡ ದೇಶಗಳಲ್ಲಿ ಕ್ಷಾಮ ಮತ್ತು ಸಾಮಾಜಿಕ ಅಶಾಂತಿಯ ಭಯವನ್ನು ಹೆಚ್ಚಿಸಿದೆ.
ವಿಶ್ವದ ಎರಡನೇ ಅತಿದೊಡ್ಡ ಗೋಧಿ ಉತ್ಪಾದಕ ಭಾರತ ಮಾರ್ಚ್ ನಲ್ಲಿ ದಾಖಲೆಯ ಉಷ್ಣ ಅಲೆಯಿಂದಾಗಿ ಗೋಧಿ ರಫ್ತನ್ನು ನಿಷೇಧಿಸುತ್ತಿದೆ ಎಂದು ಶನಿವಾರ ಹೇಳಿತ್ತು.
ಕಡಿಮೆ ಉತ್ಪಾದನೆ ಮತ್ತು ಜಾಗತಿಕ ಬೆಲೆಗಳು ತೀವ್ರವಾಗಿ ಹೆಚ್ಚಿರುವುದು ಸೇರಿದಂತೆ ತನ್ನದೇ ಆದ 1.4 ಶತಕೋಟಿ ಜನರ ಆಹಾರ ಭದ್ರತೆಯ ಬಗ್ಗೆ ಭಾರತ ಚಿಂತಿಸುತ್ತಿದೆ.