ಕಾಸರಗೋಡು: ಕೇರಳದ ಕೇಂದ್ರೀಯ ವಿಶ್ವವಿದ್ಯಾಲಯ ಪೆರಿಯಕ್ಯಾಂಪಸ್‍ನ ಸಂಶೋಧನಾ ವಿದ್ಯಾರ್ಥಿ ಡಾ. ಗ್ರೇಸ್ ರಾಜಿ ಅವರು ಕೇಂದ್ರ ಸರ್ಕಾರದ ಐಸಿಎಂಆರ್ ಫೆಲೋಶಿಪ್‍ಗೆ ಆಯ್ಕೆಯಾಗಿದ್ದಾರೆ.ಕೋವಿಡ್ ನಂತರ ರಕ್ತದಮನಿ ಕೋಶಗಳ ಅಪಸಾಮಾನ್ಯ ಪ್ರಕ್ರಿಯೆ ಮತ್ತು ರಕ್ತ ಹೆಪ್ಪುಗಟ್ಟುವಿಕೆಗೆ ಕಾರಣವಾಗುವ ಸಂಬಂಧಿತ ಮೈಕ್ರೋ ಆರ್‍ಎನ್‍ಎ ತಂತ್ರಾಂಶಗಳಿಗೆ ಸಂಬಂಧಿಸಿದ ಸಂಶೋಧನೆ ನಡೆಯಲಿದೆ.
ಆರೋಗ್ಯ ಸಚಿವಾಲಯದ ಅಧೀನದ ಆರೋಗ್ಯ ಸಂಶೋಧನಾ ಇಲಾಖೆ ಮತ್ತು ಐಸಿಎಂಆರ್(ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್) ಮಹಿಳಾ ವಿಜ್ಞಾನಿಗಳಿಗೆ ನೀಡುವ ಫೆಲೋಶಿಪ್ ಇದಾಗಿದೆ. ಮೂರು ವರ್ಷಗಳ ಸಂಶೋಧನೆಗೆ ಫೆಲೋಶಿಪ್ ಮೊತ್ತ 30 ಲಕ್ಷ ರೂ. ಲಭ್ಯವಾಗಲಿದೆ. ಕೇರಳದ ಸೆಂಟ್ರಲ್ ಯೂನಿವರ್ಸಿಟಿಯ ಬಯೋಕೆಮಿಸ್ಟ್ರಿ ಮತ್ತು ಆನ್ವಿಕ ಜೀವಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ವಿ.ಬಿ.ಸಮೀರ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಲಿದ್ದಾರೆ. ಡಾ.ವಿ.ಬಿ. ಸಮೀರ್ ಕುಮಾರ್ ಅವರ ಬಳಿ ಪಿಎಚ್‍ಡಿ ಅಧ್ಯಯನ ಪೂರೈಸಿರುವ ಡಾ. ಗ್ರೇಸ್ ರಾಜಿ ಅವರು ನಂತರ ಅದೇ ವಿಭಾಗದಲ್ಲಿ ಅತಿಥಿ ಉಪನ್ಯಾಸಕರಾಗಿ ಕೆಲಸ ನಿರ್ವಹಿಸುತ್ತಿದ್ದರು. ಕಾಞಂಗಾಡು ಕವ್ವಾಯಿ ನಿವಾಸಿಯಾಗಿರುವ ಡಾ. ಗ್ರೇಸಿ ರಾಜಿ ಅವರು ಜಿಲ್ಲಾ ಕೋವಿಡ್ ನಿಯಂತ್ರಣ ಕೋಶದ ಕಿರಿಯ ಆರೋಗ್ಯ ನಿರೀಕ್ಷಕರಾದ ಎ.ಶ್ರೀಕುಮಾರ್ ಅವರ ಪತ್ನಿ.