ಕಾಸರಗೋಡು: ನುಳ್ಳಿಪ್ಪಾಡಿ ಕನ್ನಡ ಭವನ ಮತ್ತು ಗ್ರಂಥಾಲಯದ ಆಶ್ರಯದಲ್ಲಿ ಇಂದು ಅಪರಾಹ್ನ 2.30 ರಿಂದ ಕವಿಗೋಷ್ಠಿ, ಪ್ರಶಸ್ತಿ ಪ್ರದಾನ ಹಾಗೂ ಗುರು ನಮನ ಕಾರ್ಯಕ್ರಮ ನಡೆಯಲಿದೆ.
ಸಮಾರಂಭದಲ್ಲಿ ಪತ್ರಕರ್ತ ಪ್ರದೀಪ್ ಬೇಕಲ್ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಕವಯಿತ್ರಿ ಪ್ರಮೀಳಾ ಚುಳ್ಳಿಕ್ಕಾನ, ಜಿಲ್ಲಾ ರಾಮರಾಜ ಕ್ಷತ್ರಿಯ ಯಾನೆ ಕೋಟೆಯಾರ್ ಸೇವಾ ಸಂಘದ ಅಧ್ಯಕ್ಷ ಕಮಲಾಕ್ಷ ಕಲ್ಲುಗದ್ದೆ, ಕಾರ್ಯದರ್ಶಿ ಸತೀಶ್ ಕುಮಾರ್ ದೋಣಿಬಾಗಿಲು, ಕಾಸರಗೋಡು ಬಿಇಎಂ ಶಾಲಾ ಪ್ರಾಂಶುಪಾಲೆ ರಾಜೇಶ್ವರಿ ಕೆ.ಪಿ ಮುಖ್ಯ ಅತಿಥಿಗಳಾಗಿರುವರು. ಸತೀಶ್ ಮಾಸ್ತರ್ ಕೂಡ್ಲು ಹಾಗೂ ಪ್ರಭಾಕರ ರಾವ್ ಪಳ್ಳಿಕ್ಕೆರೆ ಅವರಿಗೆ ಗುರು ನಮನ ಸಲ್ಲಿಸಲಾಗುವುದು ಕವಿಗೋಷ್ಠಿಯಲ್ಲಿ ಪತ್ರಕರ್ತ ಪುರುಷೋತ್ತಮ ಭಟ್ ಕೆ ಅಧ್ಯಕ್ಷತೆ ವಹಿಸುವರು. ಪ್ರಮೀಳಾ ಚುಳ್ಳಿಕ್ಕಾನ, ನಿರ್ಮಲಾ ಎಸ್ ಖಂಡಿಗೆ, ರೇಖಾ ಸುಧೇಶ್ ರಾವ್, ಉಷಾ ಕಿರಣ್ ಅಣಂಗೂರು, ಆಶಾ ರಾಧಾಕೃಷ್ಣ, ಚಂದ್ರಿಕಾ ಅರವಿಂದ್, ರೇಖಾ ರೋಷನ್ ಮಂಗಳೂರು, ಉಷಾ ಟೀಚರ್ ಚಿತ್ತಾರಿ, ಚಂಚಲಾಕ್ಷಿ ಶಾಮಪ್ರಸಾದ್ ಕೋಟೆಕಣಿ, ವೀಣಾ ರಾವ್ ವಾಮಂಜೂರು ಕವಿತೆಗಳನ್ನು ವಾಚಿಸುವರು.
ಈ ಸಂದರ್ಭ ಕನ್ನಡ ಪಯಸ್ವಿನಿ ಪ್ರಶಸ್ತಿ 2022 ನ್ನು ಪ್ರೊ.ಎ.ಶ್ರೀನಾಥ್, ಡಾ.ಮಂಜುಳಾ ಎ ರಾವ್ ಮಂಗಳೂರು ಹಾಗೂ ರೇಖಾ ಸುಧೇಶ್ರಾವ್ ಅವರಿಗೆ ಪ್ರದಾನ ಮಾಡಲಾಗುವುದು. ಅನೀಶ್ ಎಂ ವಾಮಂಜೂರು, ಕೃತಿ ಬೇಕಲ್ ಹಾಗೂ ಕಿರಣ್ ರಾವ್ ಕಾಸರಗೋಡು ಅವರಿಗೆ ಬಾಲ ಪ್ರತಿಭಾ ಪುರಸ್ಕಾರ ನಬೀಡಲಾಗುವುದು. ಕಮಲಾಕ್ಷ ಕೆ ಅಣಂಗೂರು, ಆಶಾ ರಾಧಾಕೃಷ್ಣ ಅಣಂಗೂರು ಹಾಗೂ ಉಮೇಶ್ರಾವ್ ಕುಂಬಳೆ ಅವರಿಗೆ ಸಮಾಜ ಸೇವಾ ರತ್ನ ಪ್ರಶಸ್ತಿ ನೀಡಲಾಗುವುದೆಂದು ಸಂಯೋಜಕ ವಾಮನ್ ರಾವ್ ಬೇಕಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.