ಕೊಚ್ಚಿ: ಅಲಪ್ಪುಳದಲ್ಲಿ ನಡೆದ ಪಾಪ್ಯುಲರ್ ಪ್ರಂಟ್ ರ್ಯಾಲಿಯಲ್ಲಿ ಬಾಲಕನೊಬ್ಬ ದ್ವೇಷದ ಘೋಷಣೆಗಳನ್ನು ಕೂಗಿದ್ದಕ್ಕಾಗಿ ಹೈಕೋರ್ಟ್ ಸರ್ಕಾರವನ್ನು ತೀವ್ರವಾಗಿ ಟೀಕಿಸಿದೆ. ರಾಜ್ಯದಲ್ಲಿ ಏನು ಬೇಕಾದರೂ ಹೇಳುವ ಪರಿಸ್ಥಿತಿ ಇದೆಯೇ ಎಂದು ನ್ಯಾಯಾಲಯ ಕೇಳಿದೆ. ಅಲಪ್ಪುಳದಲ್ಲಿ ರ್ಯಾಲಿಯನ್ನು ಆಯೋಜಿಸಿದ ಪಾಪ್ಯುಲರ್ ಫ್ರಂಟ್ ಕಾರ್ಯಕರ್ತರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆಯೂ ನ್ಯಾಯಾಲಯ ಸೂಚಿಸಿದೆ.
ಈ ಹಿಂದೆ ಪಾಪ್ಯುಲರ್ ಫ್ರಂಟ್ ರ್ಯಾಲಿ ವಿರುದ್ಧ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಇದನ್ನು ಪರಿಗಣಿಸಿದ ನ್ಯಾಯಾಲಯ ಟೀಕೆ ಎತ್ತಿದೆ. ರ್ಯಾಲಿಯಲ್ಲಿ ಅಪ್ರಾಪ್ತ ಬಾಲಕನೇ ಘೋಷಣೆ ಕೂಗಿದ್ದನೇ ಎಂಬ ಪ್ರಶ್ನೆಯನ್ನು ಎತ್ತುವ ಮೂಲಕ ಕೋರ್ಟ್ ಕಲಾಪ ಆರಂಭವಾಯಿತು.
ರಾಜ್ಯದಲ್ಲಿ ಏನಾಗುತ್ತಿದೆ?. ರ್ಯಾಲಿಯಲ್ಲಿ ಯಾರೇ ಪ್ರಚೋದನಕಾರಿಯಾಗಿ ಘೋಷಣೆ ಕೂಗಿದರೂ ಅದಕ್ಕೆ ಸಂಘಟಕರೇ ಹೊಣೆ. ಈ ರೀತಿ ಘೊಷಣೆ ಕೂಗಲು ಅವಕಾಶವಿದೆಯೇ? ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ರ್ಯಾಲಿ ವಿರುದ್ಧ ಸಲ್ಲಿಸಲಾಗಿದ್ದ ಅರ್ಜಿಯನ್ನು ಇತ್ಯರ್ಥಗೊಳಿಸುವುದಾಗಿಯೂ ನ್ಯಾಯಾಲಯ ತೀರ್ಪು ನೀಡಿದೆ.