HEALTH TIPS

ರೈಲಿನಲ್ಲಿ ‘ಬೇಬಿ ಬರ್ತ್’ ಆಸನ: ತಾಯಂದಿಯರಿಗೆ ರೈಲ್ವೆ ಇಲಾಖೆಯಿಂದ ಸಿಹಿ ಸುದ್ದಿ

            ನವದೆಹಲಿ: ಪುಟ್ಟ ಮಕ್ಕಳನ್ನು ಕರೆದುಕೊಂಡು ರೈಲುಗಳಲ್ಲಿ ಸಂಚರಿಸುವ ಪೋಷಕರಿಗೆ ರೈಲ್ವೆ ಇಲಾಖೆ ಸಿಹಿ ಸುದ್ದಿ ನೀಡಿದ್ದು, ಇನ್ನು ಮುಂದೆ ರೈಲುಗಳಲ್ಲಿ ಮಕ್ಕಳಿಗಾಗಿ ‘ಬೇಬಿ ಬರ್ತ್’ ಇರಲಿವೆ. 

          ಶಿಶುಗಳೊಂದಿಗೆ ಪ್ರಯಾಣಿಸುವ ಮಹಿಳಾ ಪ್ರಯಾಣಿಕರಿಗೆ ರೈಲು ಪ್ರಯಾಣವನ್ನು ಹೆಚ್ಚು ಅನುಕೂಲಕರ ಮತ್ತು ಆರಾಮದಾಯಕವಾಗಿಸುವ ಸಲುವಾಗಿ ಭಾರತೀಯ ರೈಲ್ವೆ ಹೊಸ ಹೆಜ್ಜೆ ಇಟ್ಟಿದೆ. ಹಸುಗೂಸುಗಳನ್ನು ಕರೆದುಕೊಂಡು ಸಂಚರಿಸುವ ಪೋಷಕರಿಗೆ ಭಾರಿ ಅನುಕೂಲವಾಗಲಿ ಎಂದು ರೈಲುಗಳಲ್ಲಿ ಮಕ್ಕಳಿಗಾಗಿ ‘ಬೇಬಿ ಬರ್ತ್’ ಅಳವಡಿಸಲಾಗಿದೆ. ಆರಂಭಿಕ ಹಂತದಲ್ಲಿ ಲಖನೌ ಮೇಲ್‌ ರೈಲುಗಳ ಲೋವರ್‌ ಬರ್ತ್ ಗಳಿಗೆ ಬೇಬಿ ಬರ್ತ್ ಗಳನ್ನು ಅಳವಡಿಸಲಾಗಿದೆ. 770 ಮಿ.ಮೀ ಉದ್ದ, 255 ಮಿ.ಮೀ ಅಗಲ ಹಾಗೂ 76.2 ಮಿ.ಮೀ ಎತ್ತರದ ಬೇಬಿ ಬರ್ತ್ ಗಳನ್ನು ರೈಲುಗಳಲ್ಲಿ ಅಳವಡಿಸಲಾಗಿದೆ.

         ರೈಲುಗಳಲ್ಲಿ ಪ್ರಯಾಣಿಸುವ ಶಿಶುಗಳಿಗಾಗಿ ‘ಬೇಬಿ ಬರ್ತ್’ ಆಸನ ವ್ಯವಸ್ಥೆ ಇರಲಿದೆ. ಆರಂಭಿಕ ಹಂತದಲ್ಲಿ ಲಖನೌ ಮೇಲ್‌ ರೈಲುಗಳಲ್ಲಿ ಪ್ರಾಯೋಗಿಕವಾಗಿ ಈ ವ್ಯವಸ್ಥೆ ಅಳವಡಿಸಲಾಗಿದೆ.   ಮಕ್ಕಳಿಗಾಗಿ ಅಳವಡಿಸಿರುವ ಈ ಆಸನಗಳು 770 ಮಿ.ಮೀ ಉದ್ದ, 255 ಮಿ.ಮೀ ಅಗಲ ಹಾಗೂ 76.2 ಮಿ.ಮೀ ಎತ್ತರ ಇರಲಿವೆ.  

               ‘ಪ್ರಯಾಣಿಕರ ಸಲಹೆ ಮೇರೆಗೆ ‘ಬೇಬಿ ಬರ್ತ್’ ಆಸನ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಪ್ರಯಾಣಿಕರಿಂದ ಉತ್ತಮ ಸ್ಪಂದನೆ ದೊರೆತರೆ ಮುಂಬರುವ ದಿನಗಳಲ್ಲಿ ಈ ಸೇವೆಯನ್ನು ವಿಸ್ತರಿಸಲಾಗುವುದು’ ಎಂದು ಉತ್ತರ ರೈಲ್ವೆ ವಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

           ‘ಬೇಬಿ ಬರ್ತ್’ ಆಸನ ವ್ಯವಸ್ಥೆಯ ಬಗ್ಗೆ ರೈಲ್ವೆ ವ್ಯವಸ್ಥೆಗಳ ಮಾಹಿತಿ ಕೇಂದ್ರದಲ್ಲಿ (ಸಿಆರ್‌ಐಎಸ್‌) ಅಗತ್ಯ ವಿವರಗಳನ್ನು ಒದಗಿಸಲಾಗಿದೆ. ಪ್ರಯಾಣಿಕರು ಅಗತ್ಯಕ್ಕೆ ತಕ್ಕಂತೆ ಬುಕ್ ಮಾಡಿಕೊಳ್ಳಬಹುದು ಎಂದು ಅಧಿಕಾರಿ ತಿಳಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries