ಪೆರ್ಲ: ಗಡಿನಾಡಿನಲ್ಲಿ ಕನ್ನಡ ತುಳು ಸಂಸ್ಕøತಿಯ ಜಾಗೃತಿಯೊಂದಿಗೆ ಮಕ್ಕಳ ಪ್ರತಿಭೆಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ರಂಗ ಡಿಂಡಿಮ ಆಯೋಜಿಸಿದ ಬೈಲಾಟ ಎಂಬ ಆಪ್ತ ರಂಗ ಪ್ರಯೋಗಕ್ಕೆ ಅಂತರ್ ರಾಜ್ಯದ ಗಡಿ ಭಾಗವಾದ ಅಡ್ಯನಡ್ಕದಿಂದ ಚಾಲನೆ ನೀಡಲಾಯಿತು.
ಮಾತೃಭೂಮಿ ಗ್ರಾಮೀಣ ಗ್ರಂಥಾಲಯ ಸಾಯ ಇದರ ಸಹಯೋಗದಲ್ಲಿ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ದ.ಕ.ಜಿಲ್ಲಾ ರಾಜ್ಯೋತ್ಸವ ಪುರಸ್ಕೃತ,ಚಿಣ್ಣರ ಮನೆ ನಿರ್ದೇಶಕ ರಾಜೇಶ್ ವಿಟ್ಲ ರಂಗ ಪರ್ಯಟನೆಗೆ ಚಾಲನೆ ನೀಡಿದರು.
ತಮಟೆ ಬಡಿಯುವ ಮೂಲಕ ಕಾರ್ಯಕ್ರಮ ಉದ್ಘಾಟಿಸಲಾಯಿತು. ಮಾತೃಭೂಮಿ ಗ್ರಂಥಾಲಯದ ಕಾರ್ಯದರ್ಶಿ ಸುರಾಜ್ ಸಾಯ ಸಭೆಯ ಅಧ್ಯಕ್ಷತೆ ವಹಿಸಿದ್ದರು. ರಂಗ ಡಿಂಡಿಮದ ನಿರ್ದೇಶಕ ಜಯ ಮಣಿಯಂಪಾರೆ, ಗೋವಿಂದ ನಾಯ್ಕ್, ಸುರೇಶ್ ಬಾಕಿಲಪದವು ಉಪಸ್ಥಿತರಿದ್ದರು. ಅಶೋಕ ಚವರ್ಕಾಡ್ ಸ್ವಾಗತಿಸಿ ಗ್ರಂಥಪಾಲಕಿ ವೀಣಾ ವಂದಿಸಿದರು.
ಬಳಿಕ ಮಕ್ಕಳ ರಂಗ ತಜ್ಞ ಉದಯ ಸಾರಂಗ್ ಅವರ ನೇತೃತ್ವದಲ್ಲಿ ಮಕ್ಕಳಿಗಾಗಿ ಹಾಡು, ಅಭಿನಯ, ಕಥೆ,ಓದು, ರಂಗ ಪಠ್ಯದ ಅನುಭವದೊಂದಿಗೆ ವಿಶೇಷ ತರಬೇತಿ ನೀಡಲಾಯಿತು.