ನವದೆಹಲಿ: ಸಂಶೋಧನೆಗೆ ಸಂಬಂಧಿಸಿದ ಸಾಧನಗಳನ್ನು ಹಂಚಿಕೊಳ್ಳುವ ಕುರಿತು ಕೇಂದ್ರ ಸರ್ಕಾರವು ಈಚೆಗೆ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದು, ಇದರಿಂದ ಸಣ್ಣ ನಗರಗಳಲ್ಲಿನ ಸಂಶೋಧಕರು ಶೀಘ್ರದಲ್ಲೇ ರಾಜ್ಯ ಅನುದಾನಿತ ಸಂಸ್ಥೆಗಳಲ್ಲಿ ದುಬಾರಿ ಸಂಶೋಧನಾ ಮೂಲಸೌಕರ್ಯ ಪಡೆಯಲು ಸಾಧ್ಯವಾಗಲಿದೆ.

ಇತ್ತೀಚೆಗೆ ಈ ಮಾರ್ಗಸೂಚಿಗಳನ್ನು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಜಿತೇಂದ್ರ ಸಿಂಗ್ ಅವರು ಬಿಡುಗಡೆ ಮಾಡಿದರು.
ಉನ್ನತಮಟ್ಟದ ಸಂಶೋಧನಾ ಸಾಧನಗಳಲ್ಲಿ ಶೇ 90ರಷ್ಟನ್ನು ಆಮದು ಮಾಡಿಕೊಳ್ಳಲಾಗಿದ್ದು, ಇವುಗಳನ್ನು ಸಂಶೋಧನಾ ಸಮುದಾಯದಲ್ಲಿ ಹಂಚಿಕೊಳ್ಳಲಾಗಿಲ್ಲ ಎಂದು ಸಚಿವರು ಗಮನಿಸಿದ್ದರು. ಹಾಗಾಗಿ, ಸಂಶೋಧನಾ ಸಾಧನಗಳನ್ನು ಸಾರ್ವಜನಿಕ ಸಂಪನ್ಮೂಲವಾಗಿ ಲಭ್ಯವಾಗುವಂತೆ ಮಾಡಲು ಸಂಶೋಧನಾ ವೈಜ್ಞಾನಿಕ ಸಂಶೋಧನಾ ಮೂಲಸೌಕರ್ಯ ಹಂಚಿಕೆ ನಿರ್ವಹಣೆ ಮತ್ತು ನೆಟ್‌ವರ್ಕ್‌ಗಳ (SRIMAN) ಮೂಲಕ ಸಾಧನಗಳನ್ನು ಹಂಚಿಕೊಳ್ಳುವಂತೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.