ಕುಂಬಳೆ: ಜಿಲ್ಲಾ ಕನ್ನಡ ಮಾಧ್ಯಮ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ, ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ ಬೆಂಗಳೂರು ಹಾಗೂ ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಸಹಯೋಗದೊಂದಿಗೆ ದತ್ತಿ ನಿಧಿ ಪ್ರಶಸ್ತಿ ಪ್ರದಾನ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಾರಥಿಗಳಿಗೆ ಅಭಿನಂದನಾ ಸಮಾರಂಭ ಮೇ 22ರಂದು ಕುಂಬಳೆ ಸನಿಹದ ನಾರಾಯಣಮಂಗಲ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯ 'ಎಂ.ವಿ ಬಳ್ಳುಳ್ಳಾಯ ವೇದಿಕೆ'ಯಲ್ಲಿ ಜರುಗಲಿದೆ.
ಬೆಳಗ್ಗೆ 9ಕ್ಕೆ ನಾರಾಯಣಮಂಗಲ ಶ್ರೀಗಣೇಶ ನಿಕೇತನದಿಂದ ನಾರಾಯಣಮಂಗಳ ಶಾಲೆ ವರೆಗೆ ನಡೆಯುವ ಅತ್ಯಾಕರ್ಷಕ ಶೋಭಾಯಾತ್ರೆಯನ್ನು ಕುಂಬಳೆ ಗ್ರಾಪಂ ಅಧ್ಯಕ್ಷೆ ಯು.ಪಿ ತಾಹಿರಾ ಯೂಸುಫ್ ಉದ್ಘಾಟಿಸುವರು.
ಪ್ರಶಸ್ತಿ ಪ್ರದಾನ ಮತ್ತು ಅಭಿನಂದನಾ ಸಮಾರಂಭವನ್ನು ಸಚಿವ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸುವರು. ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಮತ್ತು ಪಾಣಕ್ಕಾಡ್ ಸಯ್ಯದ್ ಮುನವ್ವರಲಿ ಶಿಹಾಬ್ ತಂಙಳ್ ಹಿತ ನುಡಿ ನೀಡುವರು.
ಕೆಯುಡಬ್ಲ್ಯೂಜೆ ಕರ್ನಾಟಕ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅಧ್ಯಕ್ಷತೆ ವಹಿಸುವರು. ಕರ್ನಾಟಕ ಸರ್ಕಾರದ ಮುಖ್ಯ ಸಚೇತಕ ಕೆ.ವೈ ನಾರಾಯಣ ಸ್ವಾಮಿ ಪ್ರಶಸ್ತಿ ಪ್ರದಾನ ಮಾಡುವರು.ಸಂಸದ ರಾಜ್‍ಮೋಹನ್ ಉಣ್ಣಿತ್ತಾನ್ ಅಭಿನಂದನೆ, ಶಾಸಕ ಎ.ಕೆ.ಎಂ ಅಶ್ರಫ್ ಕೃತಿ ಬಿಡುಗಡೆ, ಕರ್ನಾಟಕ ಮಾಧ್ಯಮ ಅಕಾಡಮಿ ಅಧ್ಯಕ್ಷ ಕೆ. ಸದಾಶಿವ ಶೆಣೈ ಲಾಂಛನ ಬಿಡುಗಡೆ ನಡೆಸುವರು. ಈ ಸಂದರ್ಭ ಡಾ. ವಾಣಿಶ್ರೀ ಉಚ್ಚಿಲ್‍ಕರ್, ಡಾ. ಸದಾನಂದ ಪೆರ್ಲ, ಜಯಪ್ರಕಾಶ ಶೆಟ್ಟಿ ಉಪ್ಪಳ, ಮಹಮ್ಮದ್ ಆರಿಫ್ ಪಡುಬಿದ್ರಿ, ಎಸ್. ಜಗದೀಶ್ಚಂದ್ರ ಅಂಚನ್ ಸಊಟರ್‍ಪೇಟೆ, ರಾಧಾಕೃಷ್ಣ ಕೆ. ಉಳಿಯತ್ತಡ್ಕ ಹಾಗೂ ಬಿ.ಆರ್. ಸವಿತಾ ರೈ ಮಡಿಕೇರಿ ಅವರಿಗೆ ದತ್ತಿನಿಧಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಸ್ಥಳೀಯ ಪ್ರತಿಭೆಗಳಿಂದ ನೃತ್ಯ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ತೆಲಿಕೆದ ತೆನಾಲಿ ತಂಡ ಕಾರ್ಕಳ ವತಿಯಿಂದ 'ತೆಲಿಕೆದ ಬರ್ಸ'ಕನ್ನಡ-ತುಳು ಹಾಸ್ಯ ಕಾರ್ಯಕ್ರಮ ಜರುಗಲಿರುವುದು.