HEALTH TIPS

ಬ್ಲಾಕ್ ಪಂಚಾಯಿತಿ ಸದಸ್ಯೆ, ವಿದುಷಿಃ ಅಶ್ವಿನಿ ಭಟ್‍ಗೆ ಕನ್ನೆಪ್ಪಾಡಿ ಆಶ್ರಯದಲ್ಲಿ ಅಭಿನಂದನೆ

               ಬದಿಯಡ್ಕ: ಭರತನಾಟ್ಯದಲ್ಲಿ ವಿದ್ವತ್ ಶ್ರೇಣಿಯನ್ನು ಪಡೆದ ಕಾಸರಗೋಡು ಬ್ಲಾಕ್ ಪೆರಡಾಲ ಡಿವಿಶನ್ ಸದಸ್ಯೆ ಅಶ್ವಿನಿ ಭಟ್ ನೀರ್ಚಾಲು ಅವರನ್ನು ಕನ್ನೆಪ್ಪಾಡಿ ಆಶ್ರಯ ಆಶ್ರಮದಲ್ಲಿ ಸನ್ಮಾನಿಸಲಾಯಿತು. ಹಿರಿಯರೊಂದಿಗೆ ಆಶ್ರಮದಲ್ಲಿ ತನ್ನ ಜನ್ಮಾದಿನಾಚರಣೆಗಾಗಿ ಆಗಮಿಸಿದ್ದ ಸಂದರ್ಭದಲ್ಲಿ ನಡೆದ ಸರಳ ಸಮಾರಂಭದಲ್ಲಿ ಶ್ರೀಕೃಷ್ಣ ಭಟ್ ಪುದುಕೋಳಿ ಅಧ್ಯಕ್ಷÀ್ಷತೆ ವಹಿಸಿ ಸನ್ಮಾನಿಸಿ, ಸ್ಮರಣಿಕೆಯನ್ನು ನೀಡಿ ಮಾತನಾಡಿ,  ಕಿರಿಯ ವಯಸ್ಸಿನಲ್ಲಿಯೇ ಜನಸೇವೆಯ ತುಡಿತವನ್ನು ಮೈಗೂಡಿಸಿಕೊಂಡು ಜನರೊಂದಿಗೆ ಬೆರೆಯುವ ರಾಜಕಾರಣಿಯಾಗಿಯೂ ಗುರುತಿಸಕೊಂಡಿದ್ದಾರೆ. ಕಿರಿಯ ವಯಸ್ಸಿನಲ್ಲಿಯೇ ಹಲವಾರು ನೃತ್ಯ ಪ್ರದರ್ಶನವನ್ನು ನೀಡಿರುವುದಲ್ಲದೆ ಇದೀಗ ಭರತನಾಟ್ಯದಲ್ಲಿ ವಿದ್ವತ್ ಪಡೆದಿರುವುದು ನಮಗೆಲ್ಲ ಹೆಮ್ಮೆಯ ವಿಚಾರ. ಕೇಕ್ ಕಟ್ಟಿಂಗ್ ಮೂಲಕ ಜನ್ಮದಿನಾಚರಣೆಯನ್ನು ಆಚರಿಸುವ ಈ ಕಾಲಘಟ್ಟದಲ್ಲಿ ಗೋವಿಗೆ ಗೋಗ್ರಾಸವನ್ನು ನೀಡಿ ಇಲ್ಲಿನ ಹಿರಿಯರೊಂದಿಗೆ ಜನ್ಮದಿನಾಚರಣೆಯ ಸಂಭ್ರಮವನ್ನು ಹಂಚಿಕೊಂಡು ಮಾದರಿಯಾಗಿದ್ದಾರೆ ಎಂದರು. 

                   ಬದಿಯಡ್ಕ ಗ್ರಾಮಪಂಚಾಯಿತಿ ಮಾಜಿ ಸದಸ್ಯ ಮಹೇಶ್ ಕುಮಾರ್ ವಳಕ್ಕುಂಜ ಶುಭಾಶಂಸನೆಗೈದರು. ಗಣೇಶಕೃಷ್ಣ ಅಳಕ್ಕೆ ಸ್ವಾಗತಿಸಿ, ರಮೇಶ್ ಕಳೇರಿ ವಂದಿಸಿದರು. ರಾಜೇಶ್ ಮಾಸ್ತರ್ ಅಗಲ್ಪಾಡಿ, ಸುರೇಶ್ ಯಾದವ್, ಬಾಲಸುಬ್ರಹ್ಮಣ್ಯ ಮಲ್ಲಡ್ಕ, ಶ್ಯಾಮಪ್ರಸಾದ ಸರಳಿ, ಶಿಶುಮಂದಿರದ ಅಧ್ಯಾಪಿಕೆ ಸವಿತಾ ಹಾಗೂ ಆಶ್ರಮದ ಹಿತೈಷಿಗಳು ಪಾಲ್ಗೊಂಡಿದ್ದರು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries