ಎರ್ನಾಕುಳಂ: ತನ್ನ ಬಂಧನದ ಹಿಂದೆ ಷಡ್ಯಂತ್ರವಿದೆ ಎಂದು ನಿರ್ದೇಶಕ ಸನಲ್‍ಕುಮಾರ್ ಶಶಿಧರನ್ ಹೇಳಿದ್ದಾರೆ. ಪೋಲೀಸರು ತನ್ನನ್ನು ಭಯೋತ್ಪಾದಕನಂತೆ ಬಂಧಿಸಿದ್ದಾರೆ ಎಂದು ಸನಲ್‍ಕುಮಾರ್ ಹೇಳಿದ್ದಾರೆ. ಪ್ರಕರಣದಲ್ಲಿ ಜಾಮೀನು ಪಡೆದ ನಂತರ ಮಾಧ್ಯಮಗಳಿಗೆ ಅವರು ಸಂದರ್ಶನ ನೀಡಿ ಮಾತನಾಡಿದರು.
ಸಮುದಾಯದ ಹೆಸರಾಂತ ಒಂದಿಬ್ಬರು ಕಸ್ಟಡಿಯಲ್ಲಿದ್ದಾರೆ ಎಂದರು. ಈ ಬಗ್ಗೆ ತನಿಖೆ ನಡೆಸುವುದು ಸಮಾಜದ ಕರ್ತವ್ಯ. ತನ್ನ ವಿರುದ್ಧ ದಾಖಲಾಗಿರುವ ಪ್ರಕರಣದಲ್ಲಿ ಜಾಮೀನು ಸಿಗಬಹುದು. ದೂರವಾಣಿ ಕರೆ ಮಾಡಿದರೆ ಪೋಲೀಸರ ಮುಂದೆ ಹಾಜರಾಗುತ್ತಿದ್ದೆ. ಆದರೆ ಅದರ ಬದಲಾಗಿ ಉಗ್ರರನ್ನು ಹಿಡಿಯುವಂತೆಯೇ ಕರೆದುಕೊಂಡು ಹೋದರು ಎಂದರು.
ಪೋನ್ ಇರುವ ಸ್ಥಳವನ್ನು ಪತ್ತೆಹಚ್ಚಿ ಪೆÇಲೀಸರು ಬಂದರು. ಪೋಲೀಸರು ತನ್ನನ್ನು ಬಂಧಿಸಿದಾಗ ನಾನು ಮತ್ತು ಕುಟುಂಬ ದೇವಸ್ಥಾನಕ್ಕೆ ತೆರಳುತ್ತಿದ್ದೆವು. ಇನ್ನೋವಾ ವಾಹನದಲ್ಲಿ ಪೋಲೀಸರು ಕರೆದೊಯ್ದರು. ತನಗೆ ಮಂಜು ವಾರಿಯರ್ ಎಂದರೆ ಇಷ್ಟ ಎಂದು ಹೇಳಿರುವೆ. ಆದರೆ ಕಿರುಕುಳ ನೀಡಿಲ್ಲ ಎಂದು ಹೇಳಿದರು. ಈ ಪ್ರಕರಣದಲ್ಲಿ ಆಲುವಾ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಸನಲ್‍ಕುಮಾರ್‍ಗೆ ಜಾಮೀನು ಮಂಜೂರು ಮಾಡಿದೆ.