ಡೆಹ್ರಾಡೂನ್: ಹಿಂದೂಗಳ ಪವಿತ್ರ ಸ್ಥಳಗಳಲ್ಲಿ ಒಂದಾಗಿರುವ ಕೇದಾರನಾಥ ದೇವಾಲಯಕ್ಕೆ ಭೇಟಿ ನೀಡಿದ ಭಕ್ತನೋರ್ವ ಸುಮ್ಮನೆ ಬರದೇ ಮಾಡಿದ ಕೆಲಸಕ್ಕೆ ದೇವಾಲಯದ ಆಡಳಿತ ಮಂಡಳಿ ಸರಿಯಾದ ಪಾಠ ಕಲಿಸಿದೆ.
ಚಾರ್ಧಾಮ್ ಯಾತ್ರೆಗಳಲ್ಲಿ ಒಂದಾಗ ಕೇದಾರನಾಥ ದೇವಾಲಯಕ್ಕೆ ತನ್ನ ನಾಯಿಯೊಂದಿಗೆ ತೆರಳಿದ ದೆಹಲಿ ನಿವಾಸಿಯೊಬ್ಬ ನಾಯಿಗೆ ತಿಲಕವಿಟ್ಟು ಫೋಟೋ ತೆಗೆದಿದ್ದರು.
ತ್ಯಾಗಿ ಎಂಬ ವ್ಯಕ್ತಿ ತನ್ನ ನಾಲ್ಕೂವರೆ ವರ್ಷದ ನಾಯಿಯ ಫೋಟೋ ತೆಗೆದಿದಕ್ಕೆ ಯಾರಿಗೂ ಬೇಸರವಿಲ್ಲ. ಆದರೆ ಈತ ದೇವಾಲಯದ ಆವರಣದಲ್ಲಿರುವ ನಂದಿ ವಿಗ್ರಹಕ್ಕೆ ನಾಯಿಯ ಬಾಲ ಅಂಟಿಕೊಂಡಂತಿರುವ ಫೋಟೋ ತೆಗೆದಿರುವುದು ಆಡಳಿತ ಮಂಡಳಿಯ ಕೋಪಕ್ಕೆ ಕಾರಣವಾಗಿದೆ.
ಪವಿತ್ರ ದೇವಾಲಯದಲ್ಲಿ ಈ ರೀತಿ ಮಾಡಿರುವ ಈತನ ವಿರುದ್ಧ ಎಫ್ಐಆರ್ ದಾಖಲಾಗಿದೆ. ಪವಿತ್ರ ಸ್ಥಳಗಳಲ್ಲಿ ಈ ರೀತಿಯ ವರ್ತನೆ ಮಾಡಿರುವುದು ಸರಿಯಿಲ್ಲ ಎಂದು ಆಡಳಿತ ಮಂಡಳಿ ಹೇಳಿದೆ.
ನಾಯಿಯೊಂದಿಗೆ ನಾನು ಕೇದಾರನಾಥಕ್ಕೆ ಭೇಟಿ ನೀಡಿದ್ದೆ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದ ಈತನಿಗೆ ಈಗ ಆಡಳಿತ ಮಂಡಳಿ ಪ್ರಕರಣ ದಾಖಲಿಸುವ ಮೂಲಕ ಬಿಗ್ ಶಾಕ್ ನೀಡಿದೆ.
ಕೋಟ್ಯಾಂತರ ಜನರು ಬಾಬಾ ಕೇದಾರನಾಥನಲ್ಲಿ ನಂಬಿಕೆ ಇಟ್ಟಿದ್ದಾರೆ. ಅವರ ಭಾವನೆಗಳಿಗೆ ಧಕ್ಕೆಯಾಗುವಂತೆ ಈ ವ್ಯಕ್ತಿ ನಡೆದುಕೊಂಡಿದ್ದಾನೆ. ಬಾಲಿವುಡ್ ಹಾಡುಗಳನ್ನು ಹಾಕಿ ನಾಯಿಯ ಬಾಲವನ್ನು ದೇವಾಲಯಕ್ಕೆ ಸ್ಪರ್ಶಿಸುವ ಮೂಲಕ ಭಕ್ತರ ಭಾವನೆಗಳೊಂದಿಗೆ ಆಟವಾಡಿರುವುದರಿಂದ ಈತನ ವಿರುದ್ಧ ದೂರು ನೀಡಲಾಗಿದೆ ಎಂದು ಆಡಳಿತ ಮಂಡಳಿಯ ಅಧ್ಯಕ್ಷ ಅಜೇಂದ್ರ ಅಜಯ್ ಹೇಳಿದ್ದಾರೆ.