ತ್ರಿಶೂರ್: ಪ್ರಸಿದ್ಧ ತ್ರಿಶೂರ್ ಪೂರಂ ಗೂ ಮುನ್ನ ನಡೆಯುವ ಆನ ಚಮಯಂ (ಆನೆಯ ಶೃಂಗಾರ) ವೇಳೆ ಬಳಸುವ ಛತ್ರಿಯಲ್ಲಿ ಹಿಂದುತ್ವ ರಾಜಕಾರಣದ ಐಕಾನ್ ವಿಡಿ ಸಾವರ್ಕರ್ ಅವರ ಚಿತ್ರವನ್ನು ಬಳಸಿದ್ದು ವಿವಾದಕ್ಕೆ ನಾಂದಿ ಹಾಡಿದೆ.
ತ್ರಿಶೂರ್: ಪ್ರಸಿದ್ಧ ತ್ರಿಶೂರ್ ಪೂರಂ ಗೂ ಮುನ್ನ ನಡೆಯುವ ಆನ ಚಮಯಂ (ಆನೆಯ ಶೃಂಗಾರ) ವೇಳೆ ಬಳಸುವ ಛತ್ರಿಯಲ್ಲಿ ಹಿಂದುತ್ವ ರಾಜಕಾರಣದ ಐಕಾನ್ ವಿಡಿ ಸಾವರ್ಕರ್ ಅವರ ಚಿತ್ರವನ್ನು ಬಳಸಿದ್ದು ವಿವಾದಕ್ಕೆ ನಾಂದಿ ಹಾಡಿದೆ.
ಮೇ 8 ರಂದು ನಡೆದ ಆನೆ ಚಮಯಂ ವೇಳೆ ವಿವಾದಿತ ಛತ್ರಿಗಳನ್ನು ಪ್ರದರ್ಶಿಸಲಾಗಿದೆ. ಮಹಾತ್ಮಾ ಗಾಂಧಿ, ಸ್ವಾಮಿ ವಿವೇಕಾನಂದನ್, ಸುಭಾಷ್ ಚಂದ್ರ ಬೋಸ್ ಮತ್ತು ಕೇರಳದ ಚಟ್ಟಂಬಿ ಸ್ವಾಮಿ ಮೊದಲಾದ ನಾಯಕರೊಂದಿಗೆ ಸಾವರ್ಕರ್ ಚಿತ್ರವನ್ನೂ ಹಾಕಲಾಗಿದೆ. ಇದರ ವಿರುದ್ಧ ಸಾಮಾಜಿಕ ಮಾಧ್ಯಮದಲ್ಲಿ ಆಕ್ರೋಶಕ್ಕೆ ವ್ಯಕ್ತವಾಗಿದ್ದು, ಪೂರಂ ನಿಂದ ವಿವಾದಿತ ಕೊಡೆಗಳನ್ನು ಹೊರಗಿಡಬೇಕೆಂಬ ಆಗ್ರಹ ಕೇಳಿ ಬಂದಿದೆ.
ಪತ್ರಕರ್ತೆ ಚಾರ್ಮಿ ಹರಿಕೃಷ್ಣನ್ ಈ ಬಗ್ಗೆ ಫೇಸ್‌ಬುಕ್ ಪೋಸ್ಟ್‌ನಲ್ಲಿ ತಮ್ಮ ಖಂಡನೆಯನ್ನು ವ್ಯಕ್ತಪಡಿಸಿದ್ದು 'ಪಾರಮೆಕ್ಕಾವು ಛತ್ರಿ ಮೇಲೆ ಸಾವರ್ಕರ್ ರನ್ನು ಹಾಕಬಾರದು. ತ್ರಿಶೂರ್ ಪೂರಂ ಅನ್ನು ಕೋಮುವಾದಿಕರಿಸುವುದನ್ನು ಹಾಗೂ ರಾಜಕೀಯಗೊಳಿಸುವುದನ್ನು ನಿಲ್ಲಿಸಬೇಕು' ಎಂದು ಬರೆದಿದ್ದಾರೆ.
ವಿವಾದಿತ ಛತ್ರಿ ಬಳಸಿದ ಕಾರ್ಯಕ್ರಮವನ್ನು ನಟ, ಬಿಜೆಪಿ ನಾಯಕ ಸುರೇಶ್ ಗೋಪಿ ಉದ್ಘಾಟಿಸಿದ್ದಾರೆ.